ಮಂಗಳೂರು : ಕೇಂದ್ರ ಸರ್ಕಾರಿ ಸ್ವಾಮ್ಯದ ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ಬಳಿ ಭಾರೀ ಸ್ಪೋಟ ಸಂಭವಿಸಿದೆ ಎನ್ನುವ ಮಾಹಿತಿ ತಿಳಿದು ಬಂದಿದೆ.

ಭಾರೀ ಸ್ಫೋಟದಿಂದಾಗಿ (Blast) ಸುತ್ತ-ಮುತ್ತ ದಟ್ಟ ಹೊಗೆ ಆವರಿಸಿದೆ. ಸಾವು-ನೋವಿನ ಬಗ್ಗೆ ಇನ್ನೂ ವರದಿ ಆಗಿಲ್ಲ. ಆದ್ರೆ ಸುತ್ತಮುತ್ತಲ ಜನರದಲ್ಲಿ ಭಾರೀ ಆತಂಕ ಸೃಷ್ಟಿಯಾಗಿದೆ.

ಸ್ಥಳೀಯ ನಿವಾಸಿಗಳ ಮನೆಗಳಿಗೂ ಹಾನಿ ಭಾರೀ ಸ್ಫೋಟವಾಗ್ತಿದ್ದಂತೆ ಜೋಕಟ್ಟೆ ಪಂಚಾಯತ್ ಕಟ್ಟಡ ಸಹಿತ ಮನೆಗಳು ಕಂಪಿಸಿದೆ. ಮನೆಯ ಬಾಗಿಲು ಕಿಟಕಿಗಳ ಗ್ಲಾಸ್ ಕೂಡ ಹೊಡೆದು ಹೋಗಿದ್ದು, ಎದ್ದು ಕೇಳದ ಈ ಭಾರೀ ಸದ್ದಿಗೆ ಜನರು ಬೆಚ್ಚಿಬಿದ್ದಿದ್ದಾರೆ. ಎಂಆರ್ಪಿಎಲ್ ಘಟಕದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆದಿದೆ ಎನ್ನುವ ಮಾಹಿತಿ ಹೊರ ಬಂದಿದೆ.

ಅಗ್ನಿ ಶಾಮಕ ದಳದಿಂದ ರಕ್ಷಣಾ ಕಾರ್ಯ:
ಜೋಕಟ್ಟೆ, ಸುರತ್ಕಲ್, ಬಾಳ, ಕಳವಾರು ಭಾಗದಲ್ಲಿ ಕಂಪನದ ಅನುಭವವಾಗಿದ್ದು, ಜನರು ಆತಂಕಗೊಂಡಿದ್ದಾರೆ. ಮಂಗಳೂರಿನ ಎಲ್ಲಾ ಅಗ್ನಿ ಶಾಮಕ ಘಟಕಗಳು ಎಂಆರ್ಪಿಎಲ್ಗೆ ದೌಡಾಯಿಸಿವೆ. ಸುರಕ್ಷಾ ಕ್ರಮದ ವ್ಯವಸ್ಥೆ ಪರಿಶೀಲಿಸಲಾಗುತ್ತಿದೆ.





