ಉಜಿರೆ: ವಿಶ್ವ ಆರೋಗ್ಯ ಸಂಸ್ಥೆಯ ಕರೆಯ ಮೇರೆಗೆ ವಿಶ್ವದಾದ್ಯಂತದ ಸುಮಾರು ಎಪ್ಪತ್ತು ದೇಶಗಳಲ್ಲಿ ಪ್ರತಿ ವರ್ಷ ವೈಜ್ಞಾನಿಕವಾಗಿ ಕೈ ತೊಳೆಯುವ ದಿನಾಚರಣೆ ಕಾರ್ಯಕ್ರಮ ನಡೆಯುತ್ತಿದೆ.

ಗಲೀಜು , ಕಸ , ಮೂತ್ರ ಹಾಗೂ ಮಲ ವಿಸರ್ಜನೆ ಹಾಗೂ ಪ್ರಾಣಿಗಳನ್ನು ಮುಟ್ಟಿದಾಗ , ಆಹಾರ ಸ್ವೀಕರಿಸುವ ಮೊದಲು ಹಾಗೂ ಆನಂತರ ಕೈ ತೊಳೆಯುವುದು ಅನಿವಾರ್ಯ. ಕೈಯ ಅಸುರಕ್ಷೆಯಿಂದ ಹಿಂದೆ ಅನೇಕ ಮಕ್ಕಳು ಡಯೇರಿಯ ಮುಂತಾದವುಗಳಿಂದ ಮೃತರಾಗುತ್ತಿದ್ದರು.
ಕೋರೋನ ಸಮಯದ ಅನಂತರ ಸರಿಯಾಗಿ ಕೈ ತೊಳೆಯುವ ಪರಿಪಾಠ ಬೆಳೆದಿದೆ ಎಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಸಂಸ್ಕೃತ ಭಾಷಾ ವಿಭಾಗದ ಮುಖ್ಯಸ್ಥ ಡಾ. ಪ್ರಸನ್ನಕುಮಾರ ಐತಾಳ್ ಇವರು ವಿಶ್ವ ಕೈ ತೊಳೆಯುವ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ಸಂಸ್ಕೃತ ಸಂಘ , ಯೂತ್ ರೆಡ್ ಕ್ರಾಸ್ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ವೈಜ್ಞಾನಿಕವಾಗಿ ಕೈ ತೊಳೆಯುವ ಪ್ರಾತ್ಯಕ್ಷಿಕೆ ನೀಡಿ ಮಾತನಾಡಿದರು.

ಯೂತ್ ರೆಡ್ ಕ್ರಾಸ್ ನ ಸಂಯೋಜಕಿ ಕವನಶ್ರೀ ಉಪಸ್ಥಿತರಿದ್ದರು. ಸಂಸ್ಕೃತ ಸಂಘ , ಯೂತ್ ರೆಡ್ ಕ್ರಾಸ್ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿ ಪ್ರತಿನಿಧಿ ಉಪಸ್ಥಿತರಿದ್ದರು.






