ಹುಬ್ಬಳ್ಳಿ : ಹುಬ್ಬಳ್ಳಿ ಲವ್ ಜಿಹಾದ್ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ. ಅಜ್ಞಾತ ಸ್ಥಳದಿಂದ ಸಂತ್ರಸ್ತ ಯುವತಿ ವಿಡಿಯೋವೊಂದನ್ನ ಬಿಡುಗಡೆ ಮಾಡಿದ್ದು, ವಿಡಿಯೋನಲ್ಲಿ ಜಿಮ್ ಟ್ರೈನರ್ ಸಮೀರ್ ನ ಕಾಮುಕ ಮುಖ ಬಿಚ್ಚಿಟ್ಟಿದ್ದಾರೆ.

ಇದರ ಬೆನ್ನಲ್ಲೇ ಪೊಲೀಸರು, ಮೊಬೈಲ್ ವಶಕ್ಕೆ ಪಡೆದುಕೊಂಡು ಪರಿಶೀಲನೆ ನಡೆಸಿದಾಗ ಸಮೀರ್ ಮತ್ತಷ್ಟು ಬಂಡವಾಳ ಬಟಾಬಯಲಾಗಿದೆ. ಸಮೀರ್ನ ಮೊಬೈಲ್ನಲ್ಲಿ ಬೇರೆ ಬೇರೆ ಯುವತಿಯ ಜತೆ ಇದ್ದ ಫೋಟೋಗಳು ಪತ್ತೆಯಾಗಿವೆ.
ಅಲ್ಲದೇ ಗರ್ಭನಿರೋಧಕ ಮಾತ್ರೆ ಫೋಟೋ ಸಹ ಸಿಕ್ಕಿದೆ. ಇನ್ನು ಸಮೀರ್ ತನ್ನ ಅರೆಬೆತ್ತಲೆ ಫೋಟೋಗಳನ್ನ ಯುವತಿಯರಿಗೆ ಕಳುಹಿಸುತ್ತಿದ್ದನಂತೆ. ಈ ಸಂಬಂಧ ಪೊಲೀಸ್ ತನಿಖೆ ಚುರುಕುಗೊಳಡಿಸಿದ್ದಾರೆ.







