ಚಾರ್ಮಾಡಿ : ಬೆಳ್ತಂಗಡಿ ತಾಲೂಕಿನ ವಿವಿಧ ಕಾರ್ಯಕ್ರಮಗಳಿಗೆ ಆಗಮಿಸಿದ ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಇವರ ಮನವಿ ಮೇರೆಗೆ ಚಾರ್ಮಾಡಿ ಗ್ರಾಮದ ಕುಂಡೊಟ್ಟುಗೆ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಸ್ಥಳೀಯರು ಇಲ್ಲಿಯ ಕಿರು ಸೇತುವೆಯ ಬಗ್ಗೆ ಬೇಡಿಕೆಯನಿಟ್ಟರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಸಮಿತಿಯ ಅಧ್ಯಕ್ಷರಾದ ನಾಗೇಶ್ ಕುಮಾರ್ ಗೌಡ, ಸ್ಥಳೀಯರಾದ ಯಶೋಧರ್ ಚಾರ್ಮಾಡಿ, ಅಶ್ರಫ್ ನೆರಿಯ, ಪ್ರದೀಪ್ ಕೆ.ಸಿ ಹಾಗೂ ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು.








