ಉಜಿರೆ : ಸ್ಯಾಂಡಲ್ವುಡ್ನ ‘ಡಿವೈನ್ ಸ್ಟಾರ್’, ಕಾಂತಾರ ಖ್ಯಾತಿಯ ನಟ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ ಅವರು ಇಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪ್ರಸಿದ್ಧ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ.

ಮಣ್ಣಿನ ಹರಕೆಗೆ ಹೆಸರಾದ ಉಜಿರೆಯ ಸುರ್ಯ ಶ್ರೀ ಸದಾಶಿವ ರುದ್ರ ದೇವಸ್ಥಾನಕ್ಕೆ ದಂಪತಿ ಸಮೇತರಾಗಿ ಆಗಮಿಸಿದ ಅವರು ದೇವರ ದರ್ಶನ ಪಡೆದಿದ್ದಾರೆ.

ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಡಾ. ಸತೀಶ್ಚಂದ್ರ ಸುರ್ಯ ಗುತ್ತು ದಂಪತಿಗಳು ಗೌರವಿಸಿದರು. ಈ ಸಂದರ್ಭದಲ್ಲಿ ಕಿರಣ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.





