ಮರೋಡಿ: ದೈವ, ಶ್ರೀ ಕೊಡಮಣಿತ್ತಾಯ,ಶ್ರೀ ವ್ಯಾಘ್ರ ಚಾಮುಂಡಿ ದೈವಸ್ಥಾನ ಮತ್ತು ಬ್ರಹ್ಮ ಬೈದರ್ಕಳ ಗರಡಿ ಮರೋಡಿ ಪೊಸರಡ್ಕ ಇಲ್ಲಿನ ಬ್ರಹ್ಮಕುಂಭಾಭಿಷೇಕವು ಎ.28ರಿಂದ ಮೇ.1ರವರೆಗೆ ನಡೆಯಲಿದೆ. ಬ್ರಹ್ಮಕುಂಭಾಭಿಷೇಕದ ಆಮಂತ್ರಣ ಪತ್ರಿಕೆಯನ್ನು ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ.ಪದ್ಮಪ್ರಸಾದ್ ಅಜಿಲರು ಬಿಡುಗಡೆಗೊಳಿಸಿದರು.

ಬ್ರಹ್ಮಕುಂಭಾಭಿಷೇಕ ಸಮಿತಿ ಅಧ್ಯಕ್ಷ ರಕ್ಷಿತ್ ಶಿವರಾಮ್ ಮಾತನಾಡಿ, ಪೊಸರಡ್ಕ ಕ್ಷೇತ್ರದ ಬ್ರಹ್ಮಕುಂಭಾಭಿಷೇಕ ಅತ್ಯಂತ ವೈಭವೋಪೇತವಾಗಿ ನಡೆಯಲಿದೆ. ಊರ ಪರವೂರ ಭಕ್ತರ ಸಹಕಾರ ಅದ್ಬುತವಾಗಿದೆ ಎಂದರು.


ಈ ಸಂದರ್ಭದಲ್ಲಿ ಕ್ಷೇತ್ರದ ಆಡಳಿತ ಸಮಿತಿ ಅಧ್ಯಕ್ಷ ಜಯವರ್ಮ ಬುಣ್ಣು, ಗೌರವಾಧ್ಯಕ್ಷರಾದ ರಾಜೇಂದ್ರ ಬಳ್ಳಾಳ್, ಹೇಮರಾಜ್ ಕೆ, ಬ್ರಹ್ಮಕುಂಭಾಭಿಷೇಕ ಸಮಿತಿ ಕಾರ್ಯಾಧ್ಯಕ್ಷರಾದ ಎಂ.ಎಸ್ ಪೂಜಾರಿ, ನಾರಾಯಣ ಪೂಜಾರಿ, ಪ್ರಧಾನ ಕಾರ್ಯದರ್ಶಿ ಶೀತಲ್ ಕುಮಾರ್ ಜೈನ್, ಆಡಳಿತ ಮಂಡಳಿ ಸಮಿತಿ ಸದಸ್ಯರಾದ ರಮೇಶ್ ಬಲಂತ್ಯರೊಟ್ಟು, ಪ್ರಮುಖರಾದ ನಿಖಿಲ್ ಬುಣ್ಣು, ಜಿತೇಶ್ ಜೈನ್ ಹರಂಬೆಟ್ಟು ಗುತ್ತು, ಸುಫಲಾ ಟೀಚರ್, ವಿಶು ಕುಮಾರ್ ಜೈನ್ ಪಾರೊಟ್ಟು, ಸುಂದರ ಕೋಟ್ಯಾನ್, ಆನಂದ ಶೆಟ್ಟಿ, ರವಿರಾಜ್ ಬಳ್ಳಾಲ್, ದಿವಾಕರ ಹೆಗ್ಡೆ, ರಾಮಣ್ಣ ಪೂಜಾರಿ, ಸುರೇಂದ್ರ ಬಳ್ಳಾಲ್, ಪ್ರಶಾಂತ್ ಮಚ್ಚಿನ, ಸಮಿತಿ ಸದಸ್ಯರು ಉಪಸ್ಥಿತರಿದ್ದರು.

ಆಡಳಿತಿ ಸಮಿತಿ ಕಾರ್ಯದರ್ಶಿ ಆದಿತ್ಯ ಪಿ.ಕೆ ಸ್ವಾಗತಿಸಿ,ವಂದಿಸಿದರು.



