ಬೆಳ್ತಂಗಡಿ: ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಹಾಗೂ ತುರ್ತು ನಿರ್ವಹಣಾ ಕಾಮಗಾರಿಗಳ ಹಿನ್ನೆಲೆಯಲ್ಲಿ ಬೆಳ್ತಂಗಡಿ ತಾಲ್ಲೂಕಿನ ಹಲವು ಭಾಗಗಳಲ್ಲಿ ಮೇ 07 ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.
ವಾಣಿ ಶಾಲೆ, ಚರ್ಚ್ ರಸ್ತೆ, ರೆಂಕೆದಗುತ್ತು, ಸಂತೆಕಟ್ಟೆ, ಜ್ಯೂನಿಯರ್ ಕಾಲೇಜು, ಬೆಳ್ತಂಗಡಿ ಪೇಟೆ, ಸುಧೆಮುಗೇರು, ಲಾಯಿಲ, ಕಾಶಿಬೆಟ್ಟು, ನಡ, ನಾವೂರು, ಇಂದಬೆಟ್ಟು ಹಾಗೂ
ಕೊಲ್ಲಿ ಪರಿಸರಗಳಲ್ಲಿ ಹಾಗೂ ಬೆಳ್ತಂಗಡಿಯಿಂದ ಧರ್ಮಸ್ಥಳವರೆಗಿನ 33ಕೆವಿ ಲೈನಿಗೆ ತಾಗುತ್ತಿರುವ ಮರದ ಗೆಲ್ಲುಗಳನ್ನು ತೆರವುಗೊಳಿಸುವ ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ ಧರ್ಮಸ್ಥಳ ವಿದ್ಯುತ್ ವಿತರಣಾ ಕೇಂದ್ರದಿಂದ ವಿದ್ಯುತ್ ಪೂರೈಸುತ್ತಿರುವ ಧರ್ಮಸ್ಥಳ ಟೆಂಪಲ್, ಕನ್ಯಾಡಿ, ನಿಡ್ಲೆ, ಪುದುವೆಟ್ಟು, ಪಟ್ರಮೆ, ಅರಸಿನಮಕ್ಕಿ ಫೀಡರುಗಳಲ್ಲಿ ಮೇ 07 ರಂದು ಬೆಳಿಗ್ಗೆ 10ರಿಂದ ಸಂಜೆ5.30 ರ ತನಕ ವಿದ್ಯುತ್ ನಿಲುಗಡೆ ಆಗಲಿದೆ.







