ಬೆಳ್ತಂಗಡಿ: ಪೊಲೀಸ್ ಸಿಬ್ಬಂದಿಯೊಬ್ಬರ ಮನೆಯಲ್ಲೇ ಕಳ್ಳರು ಕೈಚಳಕ ತೋರಿಸಿರುವ ಆಘಾತಕಾರಿ ಘಟನೆಯೊಂದು ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಪದ್ಮುಂಜ ಎಂಬಲ್ಲಿ ನಡೆದಿದೆ.
ಸುಮಾರು 13 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ 1 ಲಕ್ಷ ರೂಪಾಯಿ ನಗದು ಕಳವಾಗಿದೆ ಎಂದು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಮನೆಯಲ್ಲಿ ಕರುಣಾಕರ ಒಬ್ಬರೇ ಇದ್ದು, ಪತ್ನಿ ಮಕ್ಕಳು ಬೆಂಗಳೂರಿನಲ್ಲಿ ವಾಸಿಸುತ್ತಿರುವುದೆಂದು ತಿಳಿದುಬಂದಿದೆ.
ಕರುಣಾಕರ ರಾತ್ರಿ ಒಂದು ಗಂಟೆಯವರೆಗೂ ಎಚ್ಚರಿಕೆಯಲ್ಲಿದ್ದರು, ಬೆಳಿಗ್ಗೆ ಎದ್ದು ನೋಡುವಾಗ ಬಾಗಿಲಿನ ಚಿಲಕ ತೆರೆದಿರುವುನ್ನು ನೋಡಿ ಸಂಶಯಗೊಂಡ ಕರುಣಾಕರ ಗೌಡರು ಪರಿಶೀಲಿಸಿದಾಗ ಮನೆಯೊಳಗೆ ಕಳವಾಗಿರುವುದು ತಿಳಿದುಬಂದಿದೆ.
ಬೆಳ್ತಂಗಡಿ ಉಪ ವಿಭಾಗಾಧಿಕಾರಿ ರೋಹಿಣಿ, ಠಾಣಾಧಿಕಾರಿ ಕೌಶಿಕ್ ಬಿ ಸಿ.ಬೆಳ್ತಂಗಡಿ ವೃತ್ತ ನಿರೀಕ್ಷಕರು ರವಿ ಬಿ ಎಸ್ ರವರು ಸ್ಥಳಕ್ಕೆ ಭೇಟಿ ತನಿಖೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.





