ಬೆಳ್ತಂಗಡಿ: ನಲಿಕೆ ಸಮಾಜದ ರಾಜ್ಯಾಧ್ಯಕ್ಷರಾದ ಶ್ರೀಯುತ ದಯಾನಂದ ಶೇರ ಬುಡೋಳಿ ಅವರ ಮನೆಗೆ ಘಮಂತು ಕಾರ್ಯದ ಪ್ರಮುಖರು ಭೇಟಿ ನೀಡಿ, ಅವರ ಸಾಧನೆಯನ್ನು ಗುರುತಿಸಿ ಗೌರವಿಸಿದ ಘಟನೆ ನಡೆದಿದೆ.




ಜೊತೆಗೆ ನಾಡಿದ್ದು ನಡೆಯಲಿರುವ ಪ್ರಮುಖ ಬೈಠಕ್ಗೆ ಅವರಿಗೆ ಅಧಿಕೃತವಾಗಿ ಆಹ್ವಾನ ನೀಡಲಾಗಿದೆ.
ಈ ಪ್ರಮುಖ ಸಂದರ್ಭದಲ್ಲಿ ಘಮಂತು ಕಾರ್ಯದ ಮಂಗಳೂರು ವಿಭಾಗ ಸಂಯೋಜಕರಾದ ಸುದರ್ಶನ್ ಕನ್ಯಾಡಿ, ಧಾರ್ಮಿಕ ಮುಖಂಡರಾದ ಕಿರಣ್ ಚಂದ್ರ ಪುಷ್ಪಗಿರಿ, ದೀಕ್ಷಿತ್ ಡಿ.ವಿ. ಧರ್ಮಸ್ಥಳ, ಹಾಗೂ ಶರತ್ ಶೆಟ್ಟಿ ವಾಮದಪದವು ಉಪಸ್ಥಿತರಿದ್ದರು. ಅಲ್ಲದೆ ದಯಾನಂದ ಶೇರ ಬುಡೋಳಿ ಅವರ ಕುಟುಂಬದ ಸದಸ್ಯರು ಈ ಅಪೂರ್ವ ಕ್ಷಣಕ್ಕೆ ಸಾಕ್ಷಿಯಾದರು.






