ಬೆಳ್ತಂಗಡಿ : ಭಾರತೀಯ ಮಜ್ದೂರ್ ಸಂಘ ಬೆಳ್ತಂಗಡಿ ತಾಲೂಕು ಘಟಕದ ವತಿಯಿಂದ ಸೋಮವಾರ ದಿನಾಂಕ 01-06-2026 ರಂದು ಓಡಾಲ ದೊಂಪದಪಲ್ಕೆ ಶಾಲೆಯ ಬಡ ವಿದ್ಯಾರ್ಥಿಗಳಿಗೆ ಉಚಿತ ಶಾಲಾ ಬ್ಯಾಗ್ ವಿತರಣಾ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.





ಶಾಲಾ ಆರಂಭದ ಮೊದಲ ದಿನವೇ ನಡೆದ ಈ ಕಾರ್ಯಕ್ರಮದಲ್ಲಿ BMS ನ ರಾಜ್ಯ ಕಾರ್ಯದರ್ಶಿ ಜಯರಾಜ್ ಸಾಲಿಯನ್ ಕಾನರ್ಪ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಕ್ಕಳಿಗೆ ಬ್ಯಾಗ್ ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಯರಾಜ್ ಸಾಲಿಯನ್ ಅವರು, “ಕಾರ್ಮಿಕ ಸಂಘಟನೆ ಕೇವಲ ವೇತನ ಹೋರಾಟಕ್ಕೆ ಸೀಮಿತವಲ್ಲ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಶಿಕ್ಷಣ ಸಿಗಬೇಕು ಎಂಬುದು BMS ನ ಧ್ಯೇಯ. ಮಕ್ಕಳೇ ದೇಶದ ಭವಿಷ್ಯ” ಎಂದರು.
ಅಧ್ಯಕ್ಷತೆ ವಹಿಸಿದ್ದ ಉದಯ ಕುಲಾಲ್ ಬಿ.ಕೆ ಅವರು “ಬೆಳ್ತಂಗಡಿ ತಾಲೂಕಿನಲ್ಲಿ BMS ನಿರಂತರವಾಗಿ ಕಾರ್ಮಿಕರ ಸೇವಾ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ” ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ಹಾಗೂ ಇತರ ಸೌಲಭ್ಯಗಳನ್ನು ದೊರಕಿಸಿ ಕೊಡಲು ಪ್ರಯತ್ನಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ
BMS ಬೆಳ್ತಂಗಡಿ ತಾಲೂಕು ಅಧ್ಯಕ್ಷರು ಹಾಗೂ ವಕೀಲರಾದ ಉದಯ ಕುಲಾಲ್ ಬಿ.ಕೆ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. BMS ಕಟ್ಟಡ ವಿಭಾಗದ ರಾಜ್ಯ ಕಾರ್ಯದರ್ಶಿ ಕುಮಾರ್ ನಾಥ್ ಶೆಟ್ಟಿ, ಉಜಿರೆ BMS ಸಮಿತಿಯ ಕಾರ್ಯದರ್ಶಿ ಉಮೇಶ್ ಪೂಜಾರಿ ಓಡಾಲ, ಉದಯ ಕುಲಾಲ್ ಉಜಿರೆ ಹಾಗೂ ಉದಯ ಕುಂಟಿನಿ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕರು, ಪೋಷಕರು ಹಾಗೂ SDMC ಸಮಿತಿಯ ಪದಾಧಿಕಾರಿಗಳು BMS ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.






