ಧರ್ಮಸ್ಥಳ : ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯೋಗ ತರಬೇತಿಯ ಉದ್ಘಾಟನೆಯು ನಡೆಯಿತು.

ಮುಖ್ಯ ಅತಿಥಿಯಾಗಿ, ಉಜಿರೆ ಎಸ್.ಡಿ.ಎಂ. ನ್ಯಾಚುರೋಪತಿ ಕಾಲೇಜಿನ ವೈದ್ಯಶಾಸ್ತ್ರದ ಉಪನ್ಯಾಸಕಿ ಡಾ. ಶಮಿತಾ ಅವರು ಮಾತನಾಡಿ, ಯೋಗ ಅತ್ಯಂತ ಪ್ರಾಚೀನವಾದದ್ದು. ಮಕ್ಕಳಲ್ಲಿ ಯೋಗಾಭ್ಯಾಸವನ್ನು ಮೂಡಿಸುವುದರಿಂದ ಮಕ್ಕಳ ಮಾನಸಿಕ ಮತ್ತು ದೈಹಿಕ ಆರೋಗ್ಯ ಉತ್ತಮವಾಗಿರುತ್ತದೆ.ಇದು ಆರೋಗ್ಯಕರ ಜೀವನ ಸಾಗಿಸಲು ಇರುವ ಸುಲಭ ಮಾರ್ಗ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯೋಪಾಧ್ಯಾಯ ಕಮಲ್ ತೇಜ್ ರಜಪೂತ್ ಮಾತನಾಡಿ, ಮಕ್ಕಳಲ್ಲಿ ಏಕಾಗ್ರತೆ ಬರಲು ಯೋಗ ಸಹಕಾರಿಯಾಗಿದೆ. ಒಂದು ವಾರ ಕಾಲ ನಡೆಯಲಿರುವ ಈ ಶಿಬಿರ ಉತ್ತಮ ರೀತಿಯಲ್ಲಿ ನಡೆಯಲಿ ಎಂದು ಹಾರೈಸಿದರು.

ವೇದಿಕೆಯಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಕಾಲೇಜಿನ ವಿದ್ಯಾರ್ಥಿಗಳಾದ ರಾಮಕೃಷ್ಣ, ವಂದಿತ, ಭಾವನ ಉಪಸ್ಥಿತರಿದ್ದರು.
ಸಹ ಶಿಕ್ಷಕರಾದ ಶೇಖರ್ ಗೌಡ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ದೈಹಿಕ ಶಿಕ್ಷಕ ಸಂಜೀವ.ಕೆ ವಂದಿಸಿದರು.







