ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಕುಪ್ಪೆಟ್ಟಿಯ ಶ್ರೀ ದುರ್ಗಾಗಣೇಶ ಸಭಾಭವನದಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಉಪ್ಪಿನಂಗಡಿ ನಗರದ ವತಿಯಿಂದ 12ನೇ ವಿಶ್ವ ಯೋಗ ದಿನಾಚರಣೆಯನ್ನು ದಿನಾಂಕ 21ನೇ ಜೂನ್ 2026ರ ಭಾನುವಾರದಂದು ಹಮ್ಮಿಕೊಳ್ಳಲಾಗಿತ್ತು.

ಆರಂಭದಲ್ಲಿ ಶ್ರೀ ಪ್ರದೀಪ್ ನಾಯ್ಕ ಮತ್ತು ತಂಡದಿಂದ ಭಜನಾ ಕಾರ್ಯಕ್ರಮ ಬಳಿಕ ಯೋಗಬಂಧುಗಳಾದ ಶ್ರೀ ಯೋಗೀಶ್ ಅಮೃತವಚನ ಹಾಗು ಶ್ರೀಮತಿ ಸೌಮ್ಯ ಪಂಚಾಂಗ ಪಠಣವನ್ನು ನಡೆಸಿಕೊಟ್ಟರು.

ಮಾನಸಿಕ ಸಿದ್ಧತೆಯನ್ನು ಕುಮಾರ ಯಶನ್ ನಡೆಸಿದರೆ ಪ್ರಾತ್ಯಕ್ಷಿಕೆಯಲ್ಲಿ ಶ್ರೀಮತಿ ಶಶಿ ಮತ್ತು ಶ್ರೀ ಹರೀಶ್ ಸಹಕರಿಸಿದರು. ಯೋಗ ದಿನಾಚರಣೆಯ ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ದುರ್ಗಾಗಣೇಶ ಸಭಾಭವನದ ಅಧ್ಯಕ್ಷರಾದ ಶ್ರೀ ರೋಹಿತ್ ಶೆಟ್ಟಿ ನೆರವೇರಿಸಿದರೆ, ಭಜನಾ ಮಂಡಳಿಯ ಸದಸ್ಯರಾದ ಶ್ರೀ ಚಿದಾನಂದ ನಾಯ್ಕ್ ಹಾಗೂ ಸಮಿತಿಯ ತಾಲ್ಲೂಕು ಪ್ರಮುಖರು ಹಾಗು ಹಿರಿಯ ಯೋಗ ಬಂಧುಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಉದ್ಯಮಿ ಕಿರಣ್ ಚಂದ್ರ ಪುಷ್ಪಗಿರಿ ಶುಭಹಾರೈಸಿದರು. ಬೌದ್ದಿಕ್ ಅವಧಿಯಲ್ಲಿ ನಿತ್ಯ ಯೋಗದ ಲಾಭಗಳ ಜೊತೆಗೆ ನಿರಂತರ ಯೋಗಾಭ್ಯಾಸವನ್ನು ಮುಂದುವರೆಸುವಂತೆ ಡಾ.ಅನಿಶ್ ಕುಮಾರ್, ಶಿಕ್ಷಕರು – ಶಬರೀಶ ಶಾಖೆ ನೆಲ್ಯಾಡಿ ಇವರು ಕರೆ ನೀಡಿದರು.
ಬಳಿಕ ಆಯುಷ್ ಪಠ್ಯಕ್ರಮದ ಅಭ್ಯಾಸಗಳ ವಿವರಣೆಯನ್ನು ಸಮಿತಿಯ ನಮ್ಮ ಮನೆ ಶಾಖೆ, ಗುರುವಾಯನಕೆರೆಯ ಸಂಚಾಲಕಿ ಶ್ರೀಮತಿ ಸುಮಲತಾ ನೀಡಿದರು. ಪ್ರಾತ್ಯಕ್ಷಿಕೆಯಲ್ಲಿ ಯೋಗಬಂಧುಗಳಾದ ಶ್ರೀಮತಿ ಉಷಾ ಹಾಗೂ ಶ್ರೀ ಸುಬ್ರಹ್ಮಣ್ಯ ಸಹಕರಿಸಿದರು. ಅಭ್ಯಾಸಗಳ ಅವಧಿಯ ಕೊನೆಯಲ್ಲಿ ಸಾಮೂಹಿಕ ಯೋಗ ನಮನ, ಜ್ಯೋತಿರ್ಮಂತ್ರ ಹಾಗು ಐಕ್ಯ ಮಂತ್ರವನ್ನು ಪಠಿಸಲಾಯಿತು.

ಸಮಿತಿಯ ನಮ್ಮ ಮನೆ ಗುರುವಾಯನಕೆರೆ ಶಾಖೆಯ ಯೋಗಬಂಧು ಶ್ರೀಮತಿ ದಮಯಂತಿ ವಂದನೆಗಳನ್ನು ಸಲ್ಲಿಸಿದರೆ, ಮದ್ದಡ್ಕ ಶಾಖೆಯ ಶ್ರೀಮತಿ ವತ್ಸಲ ಎಂ.ಭಟ್ ಕಾರ್ಯಕ್ರಮ ನಿರೂಪಿಸಿದರು. ಪ್ರಸಾದ ಸೇವನೆಯೊಂದಿಗೆ ಕೊನೆಗೊಂಡ ಕಾರ್ಯಕ್ರಮದಲ್ಲಿ ಉಪ್ಪಿನಂಗಡಿ, ಆಲಂಕಾರು, ನೆಲ್ಯಾಡಿ, ಗುರುವಾಯನಕೆರೆ ಹಾಗು ಮದ್ದಡ್ಕ ಭಾಗದ 130ಕ್ಕೂ ಮಿಕ್ಕಿ ಯೋಗ ಹಾಗು ಸ್ಥಳೀಯ ಯೋಗೇತರ ಬಂಧುಗಳು ಭಾಗವಹಿಸಿದರು. ಸಮಿತಿಯ ಮಂಗಳೂರು ಮಹಾನಗರದ ಮಾರ್ಗದರ್ಶಕರಾದ ಶ್ರೀಯುತ ಆನಂದ ಕುಂಟಿನಿ, ಉಪ್ಪಿನಂಗಡಿ ನಗರ ಸಂಚಾಲಕರಾದ ಶ್ರೀಯುತ ಸಂತೋಷ್ ಕುಮಾರ್, ಶಿಕ್ಷಣ ಪ್ರಮುಖರಾದ ಶ್ರೀಯುತ ಪ್ರದೀಪ್ ಹಾಗು ಶಾಖಾ ಪ್ರಮುಖರುಗಳು, ಹಿರಿಯ ಯೋಗ ಬಂಧುಗಳ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ಸೊಗಸಾಗಿ ಮೂಡಿ ಬಂತು.





