ಕಡೂರು: ಕಡೂರಿನ ಕೋಟೆಯಲ್ಲಿರುವ ಶಂಕರ ಮಠದ ಗುರುಭವನದಲ್ಲಿ ವಲಯ ಮಟ್ಟದ ವರಮಹಾಲಕ್ಷ್ಮಿ ಪೂಜೆ ಮತ್ತು ಶೋಭಾಯಾತ್ರೆ, ಭಜನೋತ್ಸವ ಕಾರ್ಯಕ್ರಮ ಸಂಬಂಧಪಟ್ಟಂತೆ ಪೂರ್ವಭಾವಿ ಸಭೆ ಹಾಗೂ ನೂತನ ಸಮಿತಿ ರಚನೆ ಮಾಡಲಾಯಿತು.

ಭಕ್ತ ಭಜಕರು ಒಳ್ಳೆ ರೀತಿಯಲ್ಲಿ ಸಹಕಾರ ನೀಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಂಕಲ್ಪ ಮಾಡಲಾಯಿತು. ಸಭೆಯಲ್ಲಿ ಭಜನಾ ಪರಿಷತ್ ಜಿಲ್ಲಾ ಸಮನ್ವಯಾಧಿಕಾರಿ ಸಂತೋಷ್ ಪಿ ಅಳಿಯೂರುರವರು ಪ್ರಾಸ್ತಾವಿಕವಾಗಿ ಮಾತನಾಡಿ ಭಜನೋತ್ಸವ ತಯಾರಿ ಹಾಗೂ ಭಜನಾ ಕಮ್ಮಟದ ಮಾಹಿತಿ ನೀಡಿದರು.

ಕಡೂರು ಯೋಜನಾಧಿಕಾರಿಗಳಾದ ಶ್ರೀಮತಿ ನಾಗವೇಣಿ ರವರು ವರಮಹಾಲಕ್ಷ್ಮಿ ಪೂಜೆ ಭಜನೋತ್ಸವ ಹಾಗೂ ಸಮಿತಿ ರಚನೆಯ ಬಗ್ಗೆ,ತಯಾರಿಯ ಮಾಹಿತಿ ನೀಡಿದರು.

ತಾಲ್ಲೂಕು ಅಧ್ಯಕ್ಷ ಗಂಗಾಧರ್ ನಾಯ್ಕ್ ರಾಜಪ್ಪ ,ನಾಗರಾಜ್, ಆಶಾ ತಿಮ್ಮಯ್ಯ ಜನಜಾಗೃತಿ ವೇದಿಕೆ, ಸೋಮಶೇಖರ್, ಬೀರೂರಿನ ಸದಾಶಿವ ಎಸ್ ಪಿ, ಗಜೇಂದ್ರ ಮುಂತಾದವರು ಉಪಸ್ಥಿತರಿದ್ದರು. ಶ್ರೀಮತಿ ಭಾಗ್ಯ ಪ್ರಾರ್ಥನೆಯನ್ನು ಹಾಡಿದರು.






