ಉಡುಪಿ: ದಿನಾಂಕ 02-07-2026 ರಂದು ಶ್ರೀ ಬ್ರಹ್ಮ ಸ್ವರ್ಣಯಕ್ಷಿ ಚಿತ್ರಕೂಟ ಮತ್ತು ಶ್ರೀ ನಾಗ ಸಪರಿವಾರ ದೇವಸ್ಥಾನ ಕಾಳವಾರದ ಜೀರ್ಣೋದ್ದಾರ ಹಾಗೂ ಪುನಪ್ರತಿಷ್ಠೆ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ವತಿಯಿಂದ ವಿಶೇಷ ಭಜನಾ ಸೇವೆ ಜರುಗಿತು.

ಹಾಡುಗಾರಿಕೆ ಹಾಗೂ ಹಾರ್ಮೋನಿಯಂ ಕೀಬೋರ್ಡ್ ನಲ್ಲಿ ಭಜನಾ ಪರಿಷತ್ತಿನ ರಾಜ್ಯ ಉಪಾಧ್ಯಕ್ಷರದ ಶ್ರೀ ರಾಜೇಂದ್ರ ಕುಮಾರ್ ಬಸ್ರುರೂ, ತಬಲಾ ದಲ್ಲಿ ವಿದ್ವಾನ್ ಶ್ರೀ ರಾಮಕೃಷ್ಣಆಚಾರ್ಯ ಬಸ್ರೂರು, ಸಹಕರಿಸಿದರು, ಗಾಯಕಿ ಶ್ರೀಮತಿ ಸ್ವಪ್ನರಾಜ್ ಉಡುಪಿ ಶ್ರೀ ಶೀನ ಖಾರ್ವಿ, ಶ್ರೀ ಗೋರಕನಾಥ ರವರು ಭಜಕಾರಗಿ ಸಹಕರಿಸಿದರು.ಉಡುಪಿ ಜಿಲ್ಲಾ ಸಮನ್ವಯಾಧಿಕಾರಿ ರವೀಂದ್ರ ಎಸ್ ರವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.







