ಧರ್ಮಸ್ಥಳ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ, ಶಾಂತಿವನ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ 23ನೆಯ ರಾಜ್ಯ ಮಟ್ಟದ ಅಂಚೆ – ಕುಂಚ ಸ್ಪರ್ಧೆಯ ವಿಜೇತರ ಪಟ್ಟಿ ಅಧಿಕೃತವಾಗಿ ಪ್ರಕಟಗೊಂಡಿದೆ.
ಪ್ರಾಥಮಿಕ ಶಾಲಾ ವಿಭಾಗದಿಂದ ಹಿಡಿದು ಸಾರ್ವಜನಿಕ ವಿಭಾಗದವರೆಗೆ ರಾಜ್ಯದ ವಿವಿಧ ಮೂಲೆಗಳಿಂದ ಕಲಾವಿದರು ಅತ್ಯುತ್ಸಾಹದಿಂದ ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ವಿವಿಧ ವಿಭಾಗಗಳಲ್ಲಿ ವಿಜೇತರಾದವರ ವಿವರಗಳು ಈ ಕೆಳಗಿನಂತಿವೆ:

ಪ್ರಾಥಮಿಕ ಶಾಲಾ ವಿಭಾಗ:
ಪ್ರಥಮ : ರವಿರಾಜ ಕಿರಣ ನಾಯ್ಕ, ಡಾ. ದಿನಕರ ದೇಸಾಯಿ ಸ್ಮಾರಕ ಹಿ.ಪ್ರಾ. ಶಾಲೆ, ಅಂಕೋಲ
ದ್ವಿತೀಯ: ಅನ್ವಿತ್ ಆರ್. ಶೆಟ್ಟಿಗಾರ್, ಸೈಂಟ್ ಮೇರೀಸ್ ಆಂ.ಮಾ. ಶಾಲೆ, ಉಡುಪಿ
ತೃತೀಯ : ನಿಖಿತ, ಸರೋಜಿನಿ ಮಧುಸೂದನ ಕುಶೆ ಶಾಲೆ, ಅತ್ತಾವರ, ಮಂಗಳೂರು
ಪ್ರೌಢ ಶಾಲಾ ವಿಭಾಗ:
ಪ್ರಥಮ : ದೃತಿ ಎಸ್. ಪೂಜಾರಿ, ಲಿಟ್ಸ್ ರಾಕ್ ಇಂಡಿಯನ್ ಸ್ಕೂಲ್, ಬ್ರಹ್ಮಾವರ
ದ್ವಿತೀಯ : ಸಗನ್ ಎಸ್. ಹೆಗಡೆ, ಗ್ರೀನ್ ಪಾರ್ಕ್ ಸೆಂಟ್ರಲ್ ಸ್ಕೂಲ್, ಹಿರಿಯಡ್ಕ
ತೃತೀಯ : ಹರ್ಷದ್ ಎಂ. ಗೊಂಡ, ಶ್ರೀವಲಿ ಪ್ರೌಢ ಶಾಲೆ, ಚಿತ್ರಾಪುರ, ಶಿರಾಲಿ, ಭಟ್ಕಳ
ಕಾಲೇಜು ವಿಭಾಗ:
ಪ್ರಥಮ : ಅನುಪ ಶ್ರೀನಿವಾಸ, ಟಾಗೋರ ಚಿತ್ರಕಲಾ ಮಹಾವಿದ್ಯಾಲಯ, ಕಾರವಾರ
ದ್ವಿತೀಯ : ಪ್ರಣವ್ ಉಡುಪ, ರಾಷ್ಟೊತ್ಥಾನ ಪ.ಪೂ. ಕಾಲೇಜು, ಚೇರ್ಕಾಡಿ, ಉಡುಪಿ
ತೃತೀಯ : ಅಖಿಲೇಶ ನಾಗೇಶ ನಾಯ್ಕ, ಗೋಖಲೆ ಸೆಂಟಿನರಿ ಕಾಲೇಜು, ಅಂಕೋಲಾ
ಸಾರ್ವಜನಿಕ ವಿಭಾಗ:
ಪ್ರಥಮ : ಅನನ್ಯ ಡಿ. ನಾಯ್ಕ, ಬಸವೇಶ್ವರನಗರ, ಬೆಂಗಳೂರು
ದ್ವಿತೀಯ : ಶ್ರೀ ಬಿ.ಕೆ. ಮಾಧವ ರಾವ್, ಮೇರಿಹಿಲ್, ಕೊಂಚಾಡಿ, ಮಂಗಳೂರು
ತೃತೀಯ : ಶ್ರೀ ರಾಜೇಶ್ ಡಿ.ಎಸ್, ಕುದ್ರೋಳಿ, ಮಂಗಳೂರು
ವಿಜೇತರಿಗೆ ಬಹುಮಾನ ಹಾಗೂ ಪುರಸ್ಕಾರ ನೀಡುವ ಸಮಾರಂಭದ ದಿನಾಂಕ ಮತ್ತು ಸಮಯವನ್ನು ಮುಂದಿನ ದಿನಗಳಲ್ಲಿ ಅಧಿಕೃತವಾಗಿ ಪ್ರಕಟಿಸಲಾಗುವುದು ಎಂದು ಯೋಗ ನಿರ್ದೇಶಕರಾದ ಡಾ. ಐ. ಶಶಿಕಾಂತ್ ಜೈನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







