ಬೆಳ್ತಂಗಡಿ: ಕರಾವಳಿ ಹಾಗೂ ಮಧ್ಯ ಕರ್ನಾಟಕ ಭಾಗದ ‘ಅತ್ಯುತ್ತಮ ಶಾಸಕ’ ಪ್ರಶಸ್ತಿಗೆ ಭಾಜನರಾಗಿರುವ, ಬೆಳ್ತಂಗಡಿಯ ಅಭಿವೃದ್ಧಿಯ ಹರಿಕಾರ ಎಂದೇ ಗುರುತಿಸಿಕೊಂಡಿರುವ ಶಾಸಕ ಹರೀಶ್ ಪೂಂಜಾ ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.

ಇದೀಗ ಗರ್ಡಾಡಿ ಸಂತ ಸೆಬಾಸ್ಟಿನ್ ಚರ್ಚ್ನ ಕ್ರೈಸ್ತ ಸಮುದಾಯದವರು ಶಾಸಕರನ್ನು ಭೇಟಿಯಾಗಿ ಆತ್ಮೀಯವಾಗಿ ಅಭಿನಂದಿಸಿದ್ದಾರೆ.
ಈ ಸಂದರ್ಭದಲ್ಲಿ ಸಂತ ಸೆಬಾಸ್ಟಿನ್ ಚರ್ಚ್ ನ ಧರ್ಮಗುರುಗಳಾದ ಸುದೀಪ್ ಸಂತನ್ ಗೆನ್ಸಾಲ್ಟಿಸ್, ಚರ್ಚ್ ನ ಉಪಾಧ್ಯಕ್ಷರಾದ ಸ್ಟೀವನ್ ಮೋನಿಸ್, ಚರ್ಚ್ ನ ಕಾರ್ಯದರ್ಶಿ ಪ್ಲಾವಿಯ ಮೋನಿಸ್ , ಆಯೋಗದ ಸಂಯೋಜಕಿ ಮೇಬಲ್ ಕ್ರಾಸ್ತ, ಕ್ಯಾಥೋಲಿಕ್ ಸಭಾ ಬೆಳ್ತಂಗಡಿ ವಲಯ ಅಧ್ಯಕ್ಷರಾದ ಅಲ್ಬೇರ್ಟ ಸುನಿಲ್ ಮೋನಿಸ್ ಹಾಗೂ ಚರ್ಚ್ ನ ಪಾಲನಾ ಮಂಡಳಿ ಸದಸ್ಯರು ಹಾಜರಿದ್ದರು.




