ಬ್ರಹ್ಮಾವರ: ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ನ ಬ್ರಹ್ಮಾವರ ತಾಲೂಕು ಮಟ್ಟದ ಸಭೆಯು ಯೋಜನಾ ಕಚೇರಿಯ ಸಭಾಂಗಣದಲ್ಲಿ ಜರುಗಿತು.

ಸಭೆ ಅಧ್ಯಕ್ಷತೆಯನ್ನು ತಾಲೂಕು ಅಧ್ಯಕ್ಷರಾದ ಶ್ರೀ ಪ್ರಸನ್ನ ಕುಮಾರ್ ರವರು ವಹಿಸಿದ್ದರು. ಸಭೆಯಲ್ಲಿ ಧರ್ಮಸ್ಥಳ ಭಜನಾ ಪರಿಷತ್ತಿನ ರಾಜ್ಯ ಉಪಾಧ್ಯಕ್ಷರಾದ ಶ್ರೀ ರಾಜೇಂದ್ರ ಕುಮಾರ್ ಬಸ್ರೂರವರು ಉಪಸ್ಥಿತರಿದ್ದು ಕ್ಷೇತ್ರದ ಕಾರ್ಯಕ್ರಮಗಳ ಬಗ್ಗೆ ಹಾಗೂ 28 ನೇ ವರ್ಷದ ಭಜನಾ ಕಮ್ಮಟದ ಪೂರ್ವ ತಯಾರಿ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನೀಡಿದರು.

ಯೋಜನಾಧಿಕಾರಿಗಳಾದಂತ ಶ್ರೀ ರಮೇಶ್ ಪಿಕೆ ಅವರು ಪರಿಷತ್ತಿನ ಹಾಗೂ ಇದರ ಕಾರ್ಯ ಚಟುವಟಿಕೆಗಳ ಬಗ್ಗೆ ಪ್ರಸ್ತಾವಿಕ ಮಾತನಾಡಿದರು. ನವಂಬರ್ ತಿಂಗಳಲ್ಲಿ ಬ್ರಹ್ಮಾವರ ತಾಲೂಕು ಮಟ್ಟದ ಭಜನೋತ್ಸವವನ್ನು ನಡೆಸುವ ಬಗ್ಗೆ ನಿರ್ಣಯಿಸಲಾಯಿತು. ಸಂಗೀತ ಲೋಕದ ಸ್ವರ ಸಾಮ್ರಾಜ್ಞೆ ಎಸ್ ಜಾನಕಿ ಅವರ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷ ಮೌನ ಪ್ರಾರ್ಥನೆಯ ಮುಖಾಂತರ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಗೌರವ ಸಲಹೆಗಾರ ಆಗಿರುವಂತಹ ಶ್ರೀಮತಿ ಸವಿತಾ ಎರ್ಮಾಳ್ ರವರು ಕ್ಷೇತ್ರದ ಕಾರ್ಯಕ್ರಮಗಳ ಬಗ್ಗೆ ಪ್ರಸಂಶನೀಯ ಮಾತುಗಳನ್ನಾಡಿದರು. ಪರಿಷತ್ತಿನ ಕಾರ್ಯದರ್ಶಿಯಾದಂತಹ ಶ್ರೀ ಸುರೇಂದ್ರ ಶೆಟ್ಟಿ, ವಲಯ ಸಂಯೋಜಕರಾದಂತಹ ಶ್ರೀ ರಾಘವೇಂದ್ರ ರಾವ್, ಶ್ರೀ ಸಂದೀಪ್ ಕುರಾಡಿ, ಶ್ರೀ ಚಂದ್ರಶೇಖರ್, ಶ್ರೀಮತಿ ಶಶಿಕಲಾ ರವರು ಹಾಗೂ ತಾಲೂಕಿನ ಸುಮಾರು 30ಕ್ಕೂ ಹೆಚ್ಚಿನ ಭಜನಾ ಮಂಡಳಿಗಳಅಧ್ಯಕ್ಷರು ಕಾರ್ಯದರ್ಶಿಗಳು ಪದಾಧಿಕಾರಿಗಳು ಉಪಸ್ಥಿತರಿದ್ದರು. ಭಜನಾ ಪರಿಷತ್ತಿನ ಉಡುಪಿ ಜಿಲ್ಲಾ ಸಮನ್ವಯ ಅಧಿಕಾರಿ ರವೀಂದ್ರ ಎಸ್ ರವರು ಸ್ವಾಗತಿಸಿದರು. ಶ್ರೀಮತಿ ಶಶಿಕಲಾ (ಸೇವಾಪ್ರತಿನಿಧಿ )ರವರು ಕಾರ್ಯಕ್ರಮವನ್ನು ನಿರೂಪಿಸಿದರು.







