ಕಡೂರು: ಕಡೂರು ತಾಲೂಕು ಪಂಚನಹಳ್ಳಿ ಹೋಬಳಿಯ ಗಂಗನಹಳ್ಳಿ ಗ್ರಾಮದ ಶ್ರೀ ಚೌಡೇಶ್ವರಿ ದೇವಾಲಯದ ಮುಂಭಾಗ ಭಜನಾ ಮಂಡಳಿ ಉದ್ಘಾಟನೆ ಮಾಡಲಾಯಿತು.


ಕಡೂರು ತಾಲೂಕು ಭಜನಾ ಪರಿಷತ್ ಅಧ್ಯಕ್ಷರಾದ ಎಮ್ ಎಲ್ ಗಂಗಾಧರ್ ನಾಯ್ಕ್ ಭಜನಾ ಸೇವೆ ನಡೆಸುವ ಕುರಿತಾಗಿ ಮಾಹಿತಿ ನೀಡಿದರು. ಶರಣು ಮರಳಪ್ಪ ಅಧ್ಯಕ್ಷತೆ ವಹಿಸಿದ್ದರು.
ಮರುಳಯ್ಯನವರು ಮಲ್ಲಿಕಾರ್ಜುನಪ್ಪ ಬಸವರಾಜು ವೀರಭದ್ರಪ್ಪ ಚನ್ನಬಸವಯ್ಯ ಮಂಜುನಾಥ ಪ್ರಕಾಶ್ ಯೋಗೀಶ್ವರಪ್ಪ ಶಿವಕುಮಾರ್ ಇವರುಗಳು ಭಾಗವಹಿಸಿದ್ದರು.


ಭಜನೆ ಹಾಡುಗಳನ್ನು ಹಾಡಿದರು ಮುಂದಿನ ದಿನಗಳಲ್ಲಿ ಪ್ರತಿವಾರವೂ ಭಜನೆ ಕಾರ್ಯವನ್ನು ದೇವಾಲಯದಲ್ಲಿ ನಡೆಸಿಕೊಂಡು ತಿಳಿಸಿದರು.

ಸಂತೋಷ್ ಪಿ ಅಳಿಯೂರು ಕ್ಷೇತ್ರದಲ್ಲಿ ನಡೆಯುವ ಭಜನಾ ತರಬೇತಿ ಕಮಟ ಶಿಬಿರಾರ್ಥಿಗಳನ್ನು ಕಳಿಸಿಕೊಡುವುದರ ಬಗ್ಗೆ ಮಾಹಿತಿ ನೀಡಿದರು ಎಲ್ಲರೂ ಉತ್ತಮ ರೀತಿಯಲ್ಲಿ ಭಜನಾ ಸೇವೆಯನ್ನು ಮಾಡಿಕೊಂಡು ಹೋಗುವುದಾಗಿ ತೀರ್ಮಾನಿಸಲಾಯಿತು.






