ಕಡೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಕಡೂರು ಇದರ ಸಭೆಯು ತಾಲೂಕು ಯೋಜನಾ ಕಛೇರಿ ಸಭಾಂಗಣದಲ್ಲಿ ನಡೆಯಿತು.


ಹಿರಿಯರು ಹಾಗೂ ಭಜನೋತ್ಸವ ಸಮಿತಿಯ ಅಧ್ಯಕ್ಷರಾದ ಕೆ ಜಿ ಮಂಜುನಾಥ್ ರವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ತಾಲೂಕು ಭಜನಾ ಪರಿಷತ್ ಸಂಚಾಲಕರು,ಯೋಜನಾಧಿಕಾರಿಗಳಾದ ಶ್ರೀಮತಿ ನಾಗವೇಣಿಯವರು ಮಾತನಾಡಿ ತಾನು ಕಡೂರಿಗೆ ವರ್ಗಾವಣೆಯಾಗಿ ಬಂದ ಮೊದಲ ದೊಡ್ಡ ಮಟ್ಟದ ದೇವತಾ ಕಾರ್ಯಕ್ರಮ ಇದಾಗಿದ್ದು ಕಸಬಾ ವಲಯದ ಶಂಕರ ಮಠದಲ್ಲಿ ನಡೆಸಲಾದ ವರಮಹಾಲಕ್ಷ್ಮಿ ಪೂಜೆ ಶೋಭಾಯಾತ್ರೆ ಭಜನೋತ್ಸವ ಕಾರ್ಯಕ್ರಮ ಯಶಸ್ವಿಯಾಗಲು ಶ್ರಮಿಸಿದ ಸರ್ವರಿಗೂ ಅಭಿನಂದಿಸಿದರು.
ಭಜನೋತ್ಸವ ಸಮಿತಿಯ ಅಧ್ಯಕ್ಷರಾದ ಕೆ ಜಿ ಮಂಜುನಾಥ್ ಭಟ್ ರವರು ತಮ್ಮ ವೈಯುಕ್ತಿಕ ಜೀವನದ ಮೇಲೆ ಪೂಜ್ಯರ ಆಶೀರ್ವಾದ ಇರುವುದು ನನ್ನ ಸೌಭಾಗ್ಯ ಮುಂದಿನ ದಿನಗಳಲ್ಲಿ ಧರ್ಮಸ್ಥಳದ ಯಾವುದೇ ಕಾರ್ಯಕ್ರಮವನ್ನು ನಡೆಸಲು ಶೃಂಗೇರಿ ಶಾಖಾಮಠ ಕಡೂರು ಸದಾ ಸಿದ್ದವಾಗಿರುತ್ತದೆ ಧರ್ಮಸ್ಥಳ ಹಾಗೂ ಶೃಂಗೇರಿಯ ಆಧ್ಯಾತ್ಮಿಕ ಸಂಬಂಧ ಅಗಾಧವಾದದ್ದು ಇಂತಹ ಭಜನೋತ್ಸವ ಕಾರ್ಯಕ್ರಮಗಳ ಅಗತ್ಯತೆ ತುಂಬಾ ಇದೆ ಎಂದರು.

ಭಜನಾ ಪರಿಷತ್ ಜಿಲ್ಲಾ ಸಮನ್ವಯಾಧಿಕಾರಿ ಸಂತೋಷ್ ಪಿ ಅಳಿಯೂರು ಮುಂಬರುವ ಸಪ್ಟೆಂಬರ್ ತಿಂಗಳಲ್ಲಿ ಧರ್ಮಸ್ಥಳದಲ್ಲಿ ಭಜನಾ ಕಮ್ಮಟ ನಡೆಯಲ್ಲಿದ್ದು ಹೆಚ್ಚಿನ ಪುರುಷ ಶಿಬಿರಾರ್ಥಿಗಳು ಭಾಗವಹಿಸುವಂತೆ ತಿಳಿಸಿ ಮುಂದಿನ ದಿನಗಳಲ್ಲಿ ಭಜನಾ ಪರಿಷತ್ ಮೂಲಕ ಇನ್ನಷ್ಟು ಕಾರ್ಯಕ್ರಮ ಸಂಯೋಜನೆ ಕುರಿತು ಮಾಹಿತಿ ನೀಡಿದರು.

ತಾಲೂಕು ಭಜನಾ ಪರಿಷತ್ ಅಧ್ಯಕ್ಷರಾದ ಎಮ್ ಎಲ್ ಗಂಗಾಧರ್ ನಾಯ್ಕ್ ಮಾತನಾಡಿ ಪ್ರಸ್ತುತ ಗ್ರಾಮಾಭಿವೃದ್ಧಿ ಯೋಜನೆಯ ಸಹಯೋಗ ಉತ್ತಮ ರೀತಿಯಲ್ಲಿ ಸಿಗುತ್ತಿದ್ದು ಭಜನೋತ್ಸವ ಉತ್ತಮ ರೀತಿಯಲ್ಲಿ ಮೂಡಿಬರಲು ಸಹಕರಿಸಿದ ತಾಲೂಕು ಭಜನಾ ಪರಿಷತ್, ಭಜನೋತ್ಸವ ಸಮಿತಿ, ಗ್ರಾಮಾಭಿವೃದ್ಧಿ ಯೋಜನೆ ಒಕ್ಕೂಟಗಳ ಸರ್ವರ ಸಹಕಾರ,ಜನಜಾಗೃತಿ ವೇದಿಕೆ,ಸೇವಾ ಪ್ರತಿನಿಧಿಗಳ ವಿಶೇಷ ಸಹಕಾರಕ್ಕಾಗಿ ಅಭಿನಂದನೆ ತಿಳಿಸಿದರು. ಎಲ್ಲರೂ ಭಜನೋತ್ಸವದ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಿದರು.

ತಾಲೂಕು ಕಾರ್ಯದರ್ಶಿ ಪಿಕೆ ರಾಜಪ್ಪ, ಉಪಾಧ್ಯಕ್ಷರಾದ ಜಿ ನಾಗರಾಜ್,ಸದಾಶಿವ ಎಸ್ ಪಿ ಬೀರೂರು,ಗಜೇಂದ್ರ ಕೋಡಿಹಳ್ಳಿ, ರಮೇಶ ಕೆರೆಸಂತೆ,ಕೆ ಚಂದ್ರಪ್ಪ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಲಯ ಮೇಲ್ವಿಚಾರಕರಾದ ಶ್ರೀಮತಿ ಪವಿತ್ರ ಬಿ ಎ ಭಜನೋತ್ಸವ ಕಾರ್ಯಕ್ರಮದ ಲೆಕ್ಕಾಚಾರ ಮಂಡಿಸಿ ಕಾರ್ಯಕ್ರಮ ನಿರೂಪಿಸಿದರು.





