ಪುಂಜಾಲಕಟ್ಟೆ: ಬೆಳ್ತಂಗಡಿ ತಾಲೂಕಿನ ಕರ್ನಾಟಕ ಪಬ್ಲಿಕ್ ಸ್ಕೂಲ್ ಪುಂಜಾಲಕಟ್ಟೆಯ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಾದ ಕುಮಾರಿ ಯಶಸ್ವಿನಿ ಹಾಗೂ ಮಾಸ್ಟರ್ ನಿಕೇತ್ ರವರು NCC ಯ ಆರ್ಮಿ ವಿಭಾಗದ ರೈಫಲ್ ಫೈಯರಿಂಗ್ ಸ್ಪರ್ಧೆಯು NITK ಸುರತ್ಕಲ್ ನಲ್ಲಿ ನಡೆದು 0.22 ರೈಫಲ್ ಫೈರಿಂಗ್ ವಿಭಾಗದಲ್ಲಿ ಮಂಗಳೂರು ಗುಂಪಿನಿಂದ ಈ ಎರಡು ವಿದ್ಯಾರ್ಥಿಗಳು ಆಯ್ಕೆಯಾಗಿರುತ್ತಾರೆ.


ಈ ವಿದ್ಯಾರ್ಥಿಗಳ ರಾಜ್ಯಮಟ್ಟದ ಸ್ಪರ್ಧೆಯು ಬಳ್ಳಾರಿಯ ತೋರಂಗಲ್ಲಿನಲ್ಲಿ ನಡೆಯಲಿದ್ದು ಈ ಸ್ಪರ್ಧೆ ಗೆ ಆಯ್ಕೆಯಾಗಿರುತ್ತಾರೆ.


ಇವರ ಈ ವಿಶೇಷ ಸಾಧನೆಗೆ ಮಾರ್ಗದರ್ಶನ ತರಬೇತಿ ನೀಡಿದ ಸಂಸ್ಥೆಯ NCC ಅಧಿಕಾರಿ ನಿರಂಜನ್ ಜೈನ್ ಐ ಇವರಿಗೆ ಮತ್ತು ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಉಪ ಪ್ರಾಂಶುಪಾಲರಾದ ಗಣೇಶ ಬಿ ಇವರು ಅಭಿನಂದನೆಗಳೊಂದಿಗೆ ಮುಂದಿನ ಸ್ಪರ್ಧೆಗೆ ಶುಭವನ್ನು ಹಾರೈಸಿದರು.

ಈ ಇಬ್ಬರು ವಿದ್ಯಾರ್ಥಿಗಳನ್ನು ಇಂದು ವಿಶೇಷ ಗೌರವದೊಂದಿಗೆ ಬೀಳ್ಕೊಡಲಾಯಿತು.






