ಬೆಳ್ತಂಗಡಿ: ರಾಜ ಕೇಸರಿ ಸೇವಾ ಟ್ರಸ್ಟ್ ರಿ ಬೆಳ್ತಂಗಡಿ ತಾಲೂಕು ಇದರ ವತಿಯಿಂದ ರಾಜ ಕೇಸರಿ ಸೇವಾ ಟ್ರಸ್ಟ್ ರಿ ಕರ್ನಾಟಕ ಇದರ ಸಂಸ್ಥಾಪಕರಾದ ದೀಪಕ್ ಜಿ ಬೆಳ್ತಂಗಡಿ ಇವರ ನೇತೃತ್ವದಲ್ಲಿ 588 ನೇ ಸೇವಾ ಯೋಜನೆ
3 ವರ್ಷದ ಆಟಿದ ಕಷಾಯ ಮತ್ತು ಮೆತ್ತೆಗಂಜಿ ವಿತರಣಾ ಕಾರ್ಯಕ್ರಮ ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿ ಸಮಯ.6.00. 10.00 ವರೆಗೆ ನಡೆಯಿತು.

ಅಧ್ಯಕ್ಷತೆಯನ್ನು ರಾಜಕೇಸರಿ ಸೇವಾ ಟ್ರಸ್ಟ್ (ರಿ) ಬೆಳ್ತಂಗಡಿ ತಾಲೂಕಿನ ಅಧ್ಯಕ್ಷರಾದ ಜಗದೀಶ್ ಲಾಯಿಲ ಅವರು ವಹಿಸಿದ್ದರು. ರಾಜ ಕೇಸರಿ ಸೇವಾ (ರಿ.) ಟ್ರಸ್ಟ್ ನ ಜಿಲ್ಲಾಧ್ಯಕ್ಷರಾದ ಸಂತೋಷ್ ಕೊಲ್ಯ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ನನಗೆ ಬಹಳ ಖುಷಿಯಾಗಿದೆ, ಇಂತಹ ಸಂಘಟನೆಯಲ್ಲಿ ನಾನು ಕೆಲಸ ಮಾಡುತ್ತಿದ್ದೇನೆ, ಇದು ನನಗೆ ಹೆಮ್ಮೆಯ ವಿಚಾರ ಎಂದು ಸಂತಸ ಪಡಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಬೆಳ್ತಂಗಡಿ ತಹಶೀಲ್ದಾರ್ ಎಸ್ ಎನ್ ನರಗುಂದ ಅವರು ಆಗಮಿಸಿ, ನಾನೀಗ ಪ್ರಥಮ ಬಾರಿಗೆ ಕುಡಿಯುತ್ತಾ ಇದ್ದೇನೆ. ಬಹಳ ಕಹಿಯಾಗಿದೆ ಅದು ಇದು ಆರೋಗ್ಯಕ ಒಳ್ಳೇದು ಎಂದು ಶ್ಲಾಘಿಸಿ ನಿಮ್ಮ ಕಾರ್ಯಕ್ರಮಕ್ಕೆ ಇನ್ನಷ್ಟು ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಸುವರ್ಣ ಪ್ರತಿಷ್ಠಾನದ ಅಧ್ಯಕ್ಷರಾದ ಸಂಪತ್ ಬಿ ಸುವರ್ಣ, ಬೆಳ್ತಂಗಡಿ ತಾಲೂಕು ಪತ್ರಕರ್ತರ ಅಧ್ಯಕ್ಷರಾದ ತುಕಾರಾಮ್ ಬಿ, ವಿಜಯವಾಣಿ ವರದಿಗಾರರಾದ ಮನೋಹರ್ ಬಳಂಜ, ಸೀತಾರಾಮ್ ಶೆಟ್ಟಿ ಮಾಲಕರು ವೈಭವ್ ಹಾರ್ಡ್ವೇರ್ ಗುರುವಾಯನಕೆರೆ ಉಪಸ್ಥಿತರರಿದ್ದು ಸಾವಿರಾರು ಮಂದಿ ಈ ಕಾರ್ಯಕ್ರಮದ ಸದುಪಯೋಗಪಡಿಸಿಕೊಂಡರು.
ಖಾಸಗಿ ಬಸ್ ನೌಕರರು, ಸರ್ಕಾರಿ ಬಸ್ ಸಿಬ್ಬಂದಿಗಳು, ರಿಕ್ಷಾ ಚಾಲಕರು ಟೂರಿಸ್ಟ್ ವೆಹಿಕಲ್ಸ್ ಡ್ರೈವರ್ ತುಂಬಾ ಜನ ಖುಷಿ ವ್ಯಕ್ತಪಡಿಸಿದರು. ಸಾರ್ವಜನಿಕರು ಇಂತ ಸೇವೆ ಇನ್ನಷ್ಟು ಯಶಸ್ವಿಯಾಗಿ ಶುಭಹಾರೈಸಿದರು.
ಈ ಸಂದರ್ಭದಲ್ಲಿ ರಾಜ ಕೇಸರಿ ಸೇವಾ ಟ್ರಸ್ಟಿನ ಲೋಕೇಶ್ ಮಂಗಳಾದೇವಿ, ಸಂದೀಪ್ ಸಾಲ್ಯಾನ್ , ವರುಣ್ ಕುಮಾರ್ ಬಪ್ಪನಾಡು, ಶರತ್ ಕುಮಾರ್, ಮನೋಜ್ ಬೆಂಜನಪದವು, ಸತೀಶ್ ,ಪ್ರಸಾದ್ ಕುಲಾಲ್
ಗೌತಮ್ ಪೂಜಾರಿ , ವಿನೋದ್ ಲಾಯಿಲ, ಸಂದೀಪ್ ಬೆಳ್ತಂಗಡಿ, ಶರತ್ ಕೆಎಸ್, ಸಂದೇಶ್, ಶರತ್ ಕರಾಯ, ಪ್ರವೀಣ್ ಆಚಾರ್ಯ,ಸಂತೋಷ್ ಲಾಯಿಲ, ಪುನೀತ್ ಲಾಯಿಲ, ಪ್ರಶಾಂತ್ ಗುರುವಾಯನಕೆರೆ, ದೇವರಾಜ್ ಪೂಜಾರಿ, ಕಿಶನ್ ಚಂದ್ರ, ಜಯಂತ್, ಅಕ್ಷತ್, ವಸಂತ್, ಗಣೇಶ್, ಸತೀಶ್ ಕಂಗಿತ್ತಲ್, ನಿತೇಶ್, ಪ್ರಜ್ವಲ್ ಇವರೆಲ್ಲ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ರಾಜ ಕೇಸರಿ ಸೇವಾ ಟ್ರಸ್ಟ್ (ರಿ) ಕರ್ನಾಟಕ ಇದರ ಸಂಸ್ಥಾಪಕರಾದ ದೀಪಕ್ ಜಿ ಬೆಳ್ತಂಗಡಿ ಬಂದಂತಹ ಅತಿಥಿಗಳಿಗೆ ಸ್ವಾಗತ ಮತ್ತು ಧನ್ಯವಾದಗಳು ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದ್ದರು.




