
ವೇಣೂರು : ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಬಳಂಜ ಗ್ರಾಮದ ನಾಲ್ಕೂರು ಗ್ರಾಮದ ಪಾಡಿ ಎಂಬಲ್ಲಿ ತಲ್ಲಣಗೊಳಿಸುವ ಘಟನೆಯೊಂದು ಬೆಳಕಿಗೆ ಬಂದಿದೆ. ಇಲ್ಲಿನ ಕೃಷಿ ತೋಟವೊಂದರ ಕಣಿಯ ಬಳಿ ಅಪರಿಚಿತ ವ್ಯಕ್ತಿಯೊಬ್ಬರ ಅಸ್ಥಿಪಂಜರ ಪತ್ತೆಯಾಗಿದೆ.


ತೋಟದ ಬಳಿ ಸಿಕ್ಕ ಈ ಅಸ್ಥಿಪಂಜರದ ಜೊತೆಗೆ ತಲೆಬುರುಡೆ, ದೇಹದ ಮೂಳೆಗಳು ಹಾಗೂ ಅವರು ಧರಿಸಿದ್ದರೆನ್ನಲಾದ ವಸ್ತ್ರಗಳು ಪತ್ತೆಯಾಗಿವೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ವೇಣೂರು ಠಾಣಾ ಪೊಲೀಸರು ಹಾಗೂ ಎಫ್.ಎಸ್.ಎಲ್ (FSL) ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ.





