ವಿಟ್ಲ : ಅರಣ್ಯ ನಾಶದಿಂದಾಗಿ ಕಾಡಿನ ಪ್ರಾಣಿ ಪಕ್ಷಿಗಳು ಆಹಾರ ಹುಡುಕುತ್ತಾ ನಾಡಿಗೆ ಬರುವುದನ್ನು ತಪ್ಪಿಸುವ ಉದ್ದೇಶದ ವೀರೇಂದ್ರ ಹೆಗ್ಗಡೆಯವರ ದೂರ ದೃಷ್ಟಿಯ ಯೋಜನೆಯವೇ ಸಾಮಾಜಿಕ ಅರಣೀಕರಣ ಯೋಜನೆ ಆಗಿದೆ ಎಂದು ಗ್ರಾಮಾಭಿವೃದ್ಧಿ ಯೋಜನೆಯ ದಕ್ಷಿಣ ಕನ್ನಡ ಜಿಲ್ಲಾ ನಿರ್ದೇಶಕ ಬಾಬು ನಾಯ್ಕ್ ಹೇಳಿದರು. ಅವರು ಆಗಸ್ಟ್ 25ನೇ ಮಂಗಳವಾರ ಸರಕಾರಿ ಪ್ರೌಢಶಾಲೆ ಕಲ್ಲಂಗಲ ಕೇಪು ಇಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ.) ವಿಟ್ಲ ತಾಲೂಕಿನ ಶೌರ್ಯ ವೀಪತು ನಿರ್ವಹಣಾ ಘಟಕದ ವತಿಯಿಂದ ಸಾಮಾಜಿಕ ಅರಣೀಕರಣ ಕಾರ್ಯಕ್ರಮದ ಅಡಿಯಲ್ಲಿ ಹಣ್ಣಿನ ಗಿಡಗಳ ನಾಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶಾಲೆಯ ಅರಣ್ಯದಲ್ಲಿ ಸುಮಾರು 330 ವಿವಿಧ ಜಾತಿಯ ಫಲವಸ್ತುಗಳ ಗಿಡಗಳನ್ನು ನಾಟಿ ಮಾಡಲಾಯಿತು.
ಈ ಸಂದರ್ಭದಲ್ಲಿ ವಿಟ್ಲ ತಾಲೂಕು ಯೋಜನಾಧಿಕಾರಿ ಸುರೇಶ್ ಗೌಡ, ಪ್ರಗತಿ ಬಂದು ಸ್ವಸಹಾಯ ಸಂಘಗಳ ಕೇಂದ್ರ ಒಕ್ಕೂಟದ ಅಧ್ಯಕ್ಷ ನವೀನ್ ಚಂದ್ರ, ಜನಜಾಗೃತಿ ವೇದಿಕೆ ಅಳಿಕೆ ವಲಯ ಅಧ್ಯಕ್ಷ ಬಾಲಕೃಷ್ಣ ಕಾರಂತ್, ಪ್ರಗತಿ ಬಂದು ಸ್ವಸಹಾಯ ಸಂಘಗಳ ಒಕ್ಕೂಟಗಳ ಅಳಿಕೆ ವಲಯ ಅಧ್ಯಕ್ಷ ರಾಜೇಂದ್ರ ರೈ,ವಲಯ ಅರಣ್ಯ ಅಧಿಕಾರಿ ವೀರಣ್ಣ ಗೌಡ, ಕಲ್ಲಂಗಲ ಸರಕಾರಿ ಪ್ರೌಢಶಾಲಾ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಬಾಲಕೃಷ್ಣ ಪೂಜಾರಿ, ಮಾಜಿ ಅಧ್ಯಕ್ಷೆ ಗಿರಿಜಾ ಏನ್,ಮುಖ್ಯ ಶಿಕ್ಷಕಿ ಮಾಲತಿ ಕೆ, ಶಾಲಾ ಹಿರಿಯ ಶಿಕ್ಷಕ ಲಕ್ಷ್ಮಣ ಟಿ ನಾಯ್ಕ, ಯೋಜನೆಯ ತಾಲೂಕು ಕೃಷಿ ಮೇಲ್ವಿಚಾರಕ ಐತಪ್ಪ ನಾಯ್ಕ, ಶೌರ್ಯ ಘಟಕದ ತಾಲೂಕು ಕ್ಯಾಪ್ಟನ್ ಗಣೇಶ್, ತಾಲೂಕು ಮಾಸ್ಟರ್ ಗಿರೀಶ್, ಅಳಿಕೆ ವಲಯ ಮೇಲ್ವಿಚಾರಕಿ ಮೀನಾಕ್ಷಿ, ಒಕ್ಕೂಟ ಸೇವಾ ಪ್ರತಿನಿಧಿಗಳಾದ ಸರಸ್ವತಿ, ಗಾಯತ್ರಿ, ಜ್ಯೋತಿ, ವಿಟ್ಲ ಯೋಜನಾ ಕಚೇರಿಯ 8 ವಲಯದ ಸುಮಾರು 65 ಶೌರ್ಯ ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.




