ಹೊಸನಗರ: ಹೊಸನಗರ ಯೋಜನಾ ಕಚೇರಿಯ ಸಭಾಂಗಣದಲ್ಲಿ 28ನೇ ವರ್ಷದ ಭಜನಾ ಕಮ್ಮಟದ ಪೂರ್ವಭಾವಿ ಸಭೆ ಜರುಗಿತು.

ಸಭೆಯ ಅಧ್ಯಕ್ಷತೆಯನ್ನು ತಾಲೂಕಿನ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಸತೀಶ್ ಕೊಡುರು ಇವರು ವಹಿಸಿದ್ದರು. ರಾಜ್ಯ ಭಜನಾ ಪರಿಷತ್ತಿನ ಉಪಾಧ್ಯಕ್ಷರಾದ ರಾಜೇಂದ್ರ ಕುಮಾರ್ ಇವರು ಸಭೆಯನ್ನು ಉದ್ಘಾಟಿಸಿ ಕ್ಷೇತ್ರದ ಕಾರ್ಯ ಚಟುವಟಿಕೆಯ ಹಾಗೂ ಭಜನಾ ಕಮ್ಮಟ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದರು ಹಾಗೂ ಶಿಬಿರಾರ್ಥಿಗಳ ಸ್ವರ ಪರೀಕ್ಷೆ ನಡೆಸಲಾಯಿತು.

ಸಭೆಯ ಉದ್ದೇಶಿಸಿ ಜನಜಾಗೃತಿ ವೇದಿಕೆಯ ಸದಸ್ಯರಾದ ಶ್ರೀಯುತ ದೇವಾನಂದ್ ರವರು ಅತಿಹೆಚ್ಚಿನ ಸಂಖ್ಯೆಯಲ್ಲಿ ಶಿಬಿರಾರ್ಥಿಗಳು ಕಮ್ಮಟದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಕೇಳಿಕೊಂಡರು. ಹೊಸನಗರ ತಾಲೂಕಿನ ಯೋಜನಾಧಿಕಾರಿಗಳಾದ ಶ್ರೀಯುತ ನಾರಾಯಣ್ ರವರು ಭಜನಾ ಕಮ್ಮಟದಲ್ಲಿ ಪಾಲ್ಗೊಳ್ಳುವಿಕೆಯಿಂದಾಗುವ ಪ್ರಯೋಜನಗಳ ಬಗ್ಗೆ ವಿವರಿಸಿದರು.

ಉಡುಪಿ ಜಿಲ್ಲಾ ಸಮನ್ವಯ ಅಧಿಕಾರಿ ರವೀಂದ್ರ ಎಸ್, ರವರು ಸ್ವಾಗತಿಸಿದರು. ತಾಲೂಕು ಪರಿಷತ್ ಕಾರ್ಯದರ್ಶಿ ಉಮೇಶ್ ರವರು ಕಾರ್ಯಕ್ರಮ ನಿರೂಪಿಸಿದರು ಕಾರಣಗಿರಿ ವಲಯ ಸಂಯೋಜಕ ಶ್ರೀ ದೇವೇಂದ್ರ ವಂದಿಸಿದರು. ಎಲ್ಲಾ ವಲಯ ಸಂಯೋಜಕರು ಕಾರ್ಯದರ್ಶಿಗಳು ಭಜನಾ ತಂಡಗಳ ಅಧ್ಯಕ್ಷರು ಹಾಗೂ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು.





