ಬೆಳ್ತಂಗಡಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ, ಬೆಳ್ತಂಗಡಿಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನ ಶ್ರೀ ಮಂಜುನಾಥ ದಳದ ವತಿಯಿಂದ ಪರಿಸರ ಸ್ನೇಹಿ ಸ್ಕೌಟ್ ಗಣಪತಿ ಪೂಜಾ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಶಾಲೆಯ ಬನ್ನೀಸ್, ಕಬ್ಸ್, ಬುಲ್ಬುಲ್ಸ್, ಸ್ಕೌಟ್ಸ್ ಹಾಗೂ ಗೈಡ್ಸ್ ವಿದ್ಯಾರ್ಥಿಗಳ ಸಹಭಾಗಿತ್ವದಲ್ಲಿ ಪರಿಸರ ಸ್ನೇಹಿ ಗಣಪತಿಯನ್ನು ಪ್ರತಿಷ್ಠಾಪಿಸಲಾಯಿತು. ಹತ್ತನೇ ತರಗತಿಯ ಗೈಡ್ ವಿದ್ಯಾರ್ಥಿನಿ ಪ್ರಾಪ್ತಿ ವಿ. ಶೆಟ್ಟಿ ಅವರು ಪರಿಸರ ಸ್ನೇಹಿ ಗಣಪತಿಯ ಮೂರ್ತಿಯನ್ನು ತಯಾರಿಸಿದ್ದರು. ಶಾಲಾ ವತಿಯಿಂದ ಗಣಪತಿಗೆ ಸ್ಕೌಟ್ ಗೈಡ್ ಸ್ಕಾರ್ಫ್ ಧರಿಸಿ, ವಿವಿಧ ಪೂಜಾ ವಿಧಿವಿಧಾನಗಳೊಂದಿಗೆ ಭಕ್ತಿಪೂರ್ವಕವಾಗಿ ಆರಾಧಿಸಲಾಯಿತು. ಬಳಿಕ ಗಣಪತಿಯ ಮೂರ್ತಿಯನ್ನು ಸಮೀಪದ ಕೊಳವೆಬಾವಿಯಲ್ಲಿ ಪರಿಸರ ಸ್ನೇಹಿ ರೀತಿಯಲ್ಲಿ ವಿಸರ್ಜಿಸಲಾಯಿತು.

ಶಾಲೆಯಲ್ಲಿ ಕಳೆದ ಎಂಟು ವರ್ಷಗಳಿಂದ ಪರಿಸರ ಸಂರಕ್ಷಣೆಯ ಸಂದೇಶವನ್ನು ಸಾರುವ ಪರಿಸರ ಸ್ನೇಹಿ ಗಣಪತಿಯನ್ನು ತಯಾರಿಸಿ ಪೂಜಿಸುವ ಪರಂಪರೆಯನ್ನು ಮುಂದುವರಿಸಿಕೊಂಡು ಬರಲಾಗುತ್ತಿದೆ.
ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಹೇಮಲತಾ ಎಂ. ಆರ್. ಅವರ ಮಾರ್ಗದರ್ಶನದಲ್ಲಿ, ಸ್ಕೌಟ್–ಗೈಡ್ ಸಂಯೋಜಕಿ ಶ್ರೀಮತಿ ಪ್ರಮೀಳಾ ಪೂಜಾರಿ ಅವರ ಸಂಯೋಜನೆಯೊಂದಿಗೆ ಸ್ಕೌಟ್–ಗೈಡ್ ಶಿಕ್ಷಕರಾದ ಮಂಜುನಾಥ್, ಗೀತಾ ಪಿ., ರಮ್ಯಾ ಬಿ. ಎಸ್., ಜಯರಾಮ್, ಅಮಿತಾ, ಕಾರುಣ್ಯ, ಸಮತಾ, ಸೌಮ್ಯ ಪಿ., ಮೋಹಿನಿ, ಪುಷ್ಪಲತಾ, ಜಯಲಕ್ಷ್ಮಿ, ನೀತ ಕೆ. ಎಸ್. ಹಾಗೂ ಪ್ರಮೀಳಾ ಎನ್. ಅವರ ಸಹಕಾರ ಮತ್ತು ಸಂಘಟನೆಯೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮದಲ್ಲಿ ಬನ್ನೀಸ್, ಕಬ್ಸ್, ಬುಲ್ಬುಲ್ಸ್, ಸ್ಕೌಟ್ಸ್ ಹಾಗೂ ಗೈಡ್ಸ್ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದರು. ಶಾಲೆಯ ಶಿಕ್ಷಕ ವೃಂದ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಪರಿಸರ ಸ್ನೇಹಿ ಗಣಪತಿ ಆರಾಧನೆಯ ಮೂಲಕ ಪರಿಸರ ಸಂರಕ್ಷಣೆ, ಪ್ಲಾಸ್ಟಿಕ್ ಮುಕ್ತ ಆಚರಣೆ ಹಾಗೂ ಪ್ರಕೃತಿ ಸಂರಕ್ಷಣೆಯ ಮಹತ್ವದ ಸಂದೇಶವನ್ನು ವಿದ್ಯಾರ್ಥಿಗಳಿಗೆ ನೀಡಲಾಯಿತು.





