ಮಂಗಳೂರು: ಕದರಿಕಾ ಚಾರಿಟೇಬಲ್ ಟ್ರಸ್ಟ್ (ರಿ) ಇದರ ಅಂಗಸಂಸ್ಥೆ ಕದ್ರಿ ಕ್ರಿಕೆಟರ್ಸ್( ರಿ) ವತಿಯಿಂದ ಮಂಗಳೂರು ಕದ್ರಿ ಮೈದಾನ ದಲ್ಲಿ ನಡೆದ 4 ನೇ ವರ್ಷದ ಗಣೇಶೋತ್ಸವದ ಪ್ರಯುಕ್ತ ಸೋಮವಾರ (14-9-2026) ಮಕ್ಕಿಮನೆ ಕಲಾವೃಂದ ಮಂಗಳೂರು ಬಳಗದಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು ಎಲ್ಲರ ಮೆಚ್ಚುಗೆ ಪಡೆಯಿತು.

ಈ ಸಂದರ್ಭದಲ್ಲಿ ಮನೋಹರ ಶೆಟ್ಟಿ ಕದ್ರಿ, ತಾರನಾಥ ಶೆಟ್ಟಿ , ಹೇಮಾನಂದ ಕೊಡಿಯಾಲ್ ಬೈಲು, ರವೀಶ್ ರೈ, ಚೇತನ್ ಕದ್ರಿ, ಸುದೇಶ್ ಜೈನ್ ಮಕ್ಕಿಮನೆ, ರಿಮಾ ಜಗನ್ನಾಥ್ , ಪ್ರತೀಕ್ಷಾ ಪ್ರಭು, ಆಶೀಶ್ ಅಂಚನ್, ಅನನ್ಯ ನಾರಾಯಣ್ ಮೊದಲಾದವರು ಉಪಸ್ಥಿತರಿದ್ದರು. ಅರ್ಚಿತ್ ಜೈನ್ ಸಂಸೆ ನಿರೂಪಿಸಿದರು.







