ಮಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಮಂಗಳೂರು ಯೋಜನಾ ಕಚೇರಿ ವ್ಯಾಪ್ತಿಯ ಕೋಣಾಜೆ ವಲಯದ

ಬೋಳಿಯಾರ್ ಕಾರ್ಯಕ್ಷೇತ್ರದ ತಪಸ್ಯಾ ಫೌಂಡೇಶನ್, ಮುಡಿಪು ಇವರಿಗೆ ನೀರಿನ ಟ್ಯಾಂಕ್ ನಿರ್ಮಾಣ ಕಾರ್ಯಕ್ಕೆ ಪರಮಪೂಜ್ಯ ಡಾ.ಡಿ ವೀರೇಂದ್ರ ಹೆಗ್ಗಡೆಯವರು ಶ್ರೀ ಕ್ಷೇತ್ರದಿಂದ 3,50,000/-ರೂ ಮೊತ್ತದ DD ಯನ್ನು ವಲಯದ ವಲಯಧ್ಯಕ್ಷರಾದ ರವೀಣಾ ಅವರು ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಮಯೂರ್ ಭಂಡಾರಿ ಇವರಿಗೆ ಹಸ್ತಾಂತರಿಸಲಾಯಿತು.


ಈ ಸಂದರ್ಭದಲ್ಲಿ ತಾಲೂಕು ಭಜನಾ ಪರಿಷತ್ ಅಧ್ಯಕ್ಷರಾದ ಉಮೇಶ್ ಗಟ್ಟಿ, ವಲಯದ ಮೇಲ್ವಿಚಾರಕರಾದ ಗಿರೀಶ, ಸೇವಾಪ್ರತಿನಿಧಿಯಾದ ಲೀಲಾ ಮತ್ತು ತಪಸ್ಯಾ ಫೌಂಡೇಶನ್ ನ ಸಿಬ್ಬಂದಿಗಳು ಹಾಜರಿದ್ದರು.





