ಕಲ್ಲಡ್ಕ: ಕಲ್ಲಡ್ಕ ಬಿಲ್ಲವ ಸಮಾಜ ಸೇವಾ ಟ್ರಸ್ಟಿನ ಮೊದಲ ಸಭೆಯು ಮೆಲ್ಕಾರ್ ಬಿರ್ವ ಸೆಂಟರ್ ನ ಮಿನಿ ಹಾಲ್ ನಲ್ಲಿ ಅಕ್ಟೋಬರ್ 4 ಆದಿತ್ಯವಾರ ಜರಗಿತು. ಸಭೆಯಲ್ಲಿ ಟ್ರಸ್ಟಿನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಚಂದ್ರ ಶೇಖರ್ ಸಾಲಿಯಾನ್ , ಉಪಾಧ್ಯಕ್ಷರಾಗಿ ಶರತ್ ಅಮ್ಮ್ಟೂರ್, ಕಾರ್ಯದರ್ಶಿಯಾಗಿ ಕಿಶೋರ್ ಕುಮಾರ್ ಕಟ್ಟೆಮಾರ್, ಜತೆ ಕಾರ್ಯದರ್ಶಿಯಾಗಿ ಜಯಪ್ರಶಾಂತ್ ಸ್ಟಾರ್ ನೆಟ್ವರ್ಕ್,
ಕೋಶಾಧಿಕಾರಿಯಾಗಿ ದಿನೇಶ್ ಕೃಷ್ಣಕೋಡಿ ರವರನ್ನು ಆಯ್ಕೆ ಮಾಡಲಾಯಿತು.


ಕಲ್ಲಡ್ಕ ಬಿಲ್ಲವ ಸಮಾಜ ಸೇವಾ ಸಂಘಕ್ಕೆ ನಿವೇಶನ ಖರೀದಿ ಹಾಗೂ ನೂತನ ನಾರಾಯಣ ಗುರು ಮಂದಿರ ನಿರ್ಮಿಸಲು ಕಾನೂನಿನ ಮೂಲಕ. ನೊಂದಣಿಯಾದ ಟ್ರಸ್ಟ್ ಅಗತ್ಯವಿದ್ದು ಅದಕ್ಕೋಸ್ಕರ ನೂತನ ಟ್ರಸ್ಟ್ ರಚಿಸಿದ್ದು ಬಿಲ್ಲವ ಸಮಾಜ ಸೇವಾ ಸಂಘದ ಸರ್ವ ಸದಸ್ಯರುಗಳು ಪೂರ್ಣ ಸಹಕಾರ ನೀಡಬೇಕೆಂದು ಕಲ್ಕಡ್ಕ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಚಂದ್ರಶೇಖರ್ ಸಾಲಿಯಾನ್ ತಿಳಿಸಿರುತ್ತಾರೆ.





