ಮುಂಡಾಜೆ: ಮುಂಡಾಜೆ ಪದವಿಪೂರ್ವ ಕಾಲೇಜು ಮುಂಡಾಜೆ ಹಾಗೂ ಸರಸ್ವತಿ ಆಂಗ್ಲ ಮಾಧ್ಯಮ ಶಾಲೆ ಮುಂಡಾಜೆ ಇದರ ರೋವರ್ಸ್-ರಂಜರ್ಸ್, ಸ್ಕೌಟ್-ಗೈಡ್ಸ್, ಹಾಗೂ ಕಬ್-ಬುಲ್ ಬುಲ್ ವಿಭಾಗದ ವತಿಯಿಂದ ಸರ್ವಧರ್ಮ ಪ್ರಾರ್ಥನೆಯನ್ನು ನಡೆಸಲಾಯಿತು.
ಧಾರ್ಮಿಕ ಸೌಹಾರ್ದತೆಯನ್ನುಂಟು ಮಾಡುವ ಈ ಪ್ರಾರ್ಥನೆಯಲ್ಲಿ ಮುಂಡಾಜೆ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಗೀತಾ, ಸರಸ್ವತಿ ಆಂಗ್ಲ ಮಾಧ್ಯಮ ಶಾಲೆ ಮುಂಡಾಜೆಯ ಮುಖ್ಯಶಿಕ್ಷಕಿ ಚಂದ್ರಮತಿ, ಹಿರಿಯ ಶಿಕ್ಷಕಿ ಶ್ರೀಜಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ರೋವರ್ ಸ್ಕೌಟ್ ಲೀಡರ್ ಕೃಷ್ಣ ಕಿರಣ್ ಕೆ, ರೇಂಜರ್ ಲೀಡರ್ ಶ್ರೀಮತಿ ವಸಂತಿ, ಗೈಡ್ ಕ್ಯಾಪ್ಟನ್ ರೇವತಿ, ಕಬ್ ಮಾಸ್ಟರ್ ಪ್ರೇಮ, ಪ್ಲಾಕ್ ಲೀಡರ್ ಭಾರತಿ ಕಾರ್ಯಕ್ರಮವನ್ನು ಸಂಘಟಿಸಿದರು.
ಶಿಕ್ಷಣ ಸಂಸ್ಥೆಯ ಬೋಧಕ, ಬೋಧಕೇತರ ಸಿಬ್ಬಂದಿಗಳು, ಹಾಗೂ ವಿಭಾಗದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.




