ಬೆಳ್ತಂಗಡಿ: ಕನ್ಯಾಡಿಯಲ್ಲಿ ಶಾರದಾ ಮಹೋತ್ಸವದ ಅಂಗವಾಗಿ ಅದ್ದೂರಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಮೆಲೋಡಿ ಎನ್. ಮ್ಯೂಸಿಕ್ ತಂಡದ ವತಿಯಿಂದ “ಭಕ್ತಿ ಭಾವ ಜಾನಪದ ರಸಮಂಜರಿ” ಸಂಗೀತ ಕಾರ್ಯಕ್ರಮವು ಅಕ್ಟೋಬರ್.18 ರಂದು ಪೂರ್ವಾಹ್ನ 10:00 ರಿಂದ 11:30 ರ ತನಕ ನಡೆಯಲಿದೆ.

ಈ ಕಾರ್ಯಕ್ರಮವನ್ನು “ಮೆಲೋಡಿ ಬಾಯ್” ಲೋಕೇಶ್ ಅವರು ಅರ್ಪಿಸುತ್ತಿದ್ದಾರೆ. ರಸಮಂಜರಿ ಕಾರ್ಯಕ್ರಮದಲ್ಲಿ ಪ್ರಸಿದ್ಧ ಗಾಯಕರಾದ ರೇಷ್ಮಾ ಮಂಗಳೂರು ರಶ್ಮಿ ಗೌಡ ಕಿರಿಭಾಗ ಸಂತೋಷ್ ಆಚಾರ್ಯ ಉಜಿರೆ ಇವರು ತಮ್ಮ ಗಾಯನದ ಮೂಲಕ ಪ್ರೇಕ್ಷಕರನ್ನು ರಂಜಿಸಲಿದ್ದಾರೆ.

ಈ ವೈಭವೋಪೇತ ಕಾರ್ಯಕ್ರಮಕ್ಕೆ ನೈಮಿಷ ವೆಂಚರ್ಸ್ ಸೌತಡ್ಕದ ಮಾಲಕರಾದ ಶ್ರೀ ಬಾಲಕೃಷ್ಣ ಅವರು ಪ್ರಾಯೋಜಕತ್ವ ವಹಿಸಿದ್ದಾರೆ. ಸಂಗೀತ ಹಾಗೂ ಸಾಂಸ್ಕೃತಿಕ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಸಂಘಟಕರು ವಿನಂತಿಸಿದ್ದಾರೆ.





