ಬೆಳ್ತಂಗಡಿ: ಕೊಯ್ಯೂರ್ ದೇವಸ್ಥಾನ ಶಾಲೆಯಲ್ಲಿ ನಡೆದ 2026–27ನೇ ಸಾಲಿನ ಕ್ಲಸ್ಟರ್ ಮಟ್ಟದ ಪ್ರಾಥಮಿಕ ವಿಭಾಗದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಬೆಳ್ತಂಗಡಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆಗೈದು ಶಾಲೆಗೆ ಕೀರ್ತಿ ತಂದಿದ್ದಾರೆ.

ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಒಟ್ಟು 7 ಪ್ರಥಮ ಸ್ಥಾನ, 8 ದ್ವಿತೀಯ ಸ್ಥಾನ ಹಾಗೂ 1 ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.


ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳು:
- ದೇಶಭಕ್ತಿಗೀತೆ – ಅಂಜಲಿ
- ಆಂಗ್ಲ ಭಾಷಾ ಕಂಠಪಾಠ – ಆದ್ಯಂತ್
- ಚಿತ್ರಕಲೆ – ಯಶ್ವಿತ್
- ಭಕ್ತಿಗೀತೆ – ಮನಸ್ವಿ
- ಪ್ರಬಂಧ ರಚನೆ – ಅಭಿಜ್ಞಾ
- ಅಭಿನಯ ಗೀತೆ – ನಿಯತಿ ಭಟ್
- ಅಭಿನಯ ಗೀತೆ – ಅನಘಾ ಎ.ಜಿ.
ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳು:
- ಕನ್ನಡ ಕಂಠಪಾಠ – ಅನಘಾ ಎ.ಜಿ.
- ಮಣ್ಣಿನ ಮಾದರಿ ತಯಾರಿಕೆ – ಮೊಹಮ್ಮದ್ ಸಫ್ವಾನ್
- ಕವನ ವಾಚನ – ಅಂಜಲಿ
- ಸಂಸ್ಕೃತ ಪಠಣ – ನಿಯತಿ ಭಟ್
- ಆಶುಭಾಷಣ – ತನಿಯಾ ಜೈನ್
- ಆಶುಭಾಷಣ – ಧಾತ್ರಿ
- ಹಿಂದಿ ಕಂಠಪಾಠ – ದಿಶಾ ಡಿ.ಎ.
- ಕಥೆ ಹೇಳುವುದು – ದಿಶಾ ಡಿ.ಎ.
ತೃತೀಯ ಸ್ಥಾನ:
- ಸಂಸ್ಕೃತ ಪಠಣ – ಶ್ರೀ ರಾಮ್
ವಿದ್ಯಾರ್ಥಿಗಳ ಈ ಸಾಧನೆಗೆ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಹೇಮಲತಾ ಎಂ. ಆರ್. ಹಾಗೂ ಶಿಕ್ಷಕ ವೃಂದದವರು ಅಭಿನಂದನೆ ಸಲ್ಲಿಸಿ, ಮುಂದಿನ ಹಂತಗಳಲ್ಲಿಯೂ ಇನ್ನಷ್ಟು ಯಶಸ್ಸು ಸಾಧಿಸುವಂತೆ ಶುಭ ಹಾರೈಸಿದರು.
ವಿದ್ಯಾರ್ಥಿಗಳ ಪ್ರತಿಭೆ, ಪರಿಶ್ರಮ ಹಾಗೂ ಶಿಕ್ಷಕರ ಮಾರ್ಗದರ್ಶನದಿಂದ ಶಾಲೆಗೆ ಹೆಮ್ಮೆಯ ಸಾಧನೆ ಲಭಿಸಿದೆ.





