ಬೆಳ್ತಂಗಡಿ : ಆಟೋ ಪಲ್ಟಿಯಾಗಿ ಚಾಲಕ ಆಸ್ಪತ್ರೆಗೆ ಸಾಗಿಸುವ ವೇಳೆ ಸಾವನ್ನಪ್ಪಿದ ಘಟನೆ ಅಳದಂಗಡಿಯಲ್ಲಿ ನಡೆದಿದೆ.
ಬೆಳ್ತಂಗಡಿ ತಾಲೂಕಿನ ಅಳದಂಗಡಿ ಸತ್ಯದೇವತೆ ದೇವಸ್ಥಾನದ ಬಳಿ ಏ.16 ರಂದು ಬೆಳಗ್ಗೆ ಗುರುವಾಯನಕೆರೆ ಕಡೆಯಿಂದ ಅಳದಂಗಡಿ ಕಡೆ ಬಾಡಿಗೆ ಮಾಡಿ ವಾಪಸ್ ಹೋಗುವಾಗ ರಸ್ತೆಯಲ್ಲಿ ನಾಯಿ ಅಡ್ಡಬಂದು ಆಟೋ ಪಲ್ಟಿಯಾಗಿ ಬೆಳ್ತಂಗಡಿ ತಾಲೂಕಿನ ನಾವರ ಗ್ರಾಮದ ಹಾರಡ್ಡೆ ನಿವಾಸಿ ಆಟೋ ಚಾಲಕ ವೃತ್ತಿ ಮಾಡುತ್ತಿದ್ದ ದೇವಪ್ಪ@ ಸುಧಾಕರ (37) ಸಾವನ್ನಪ್ಪಿದ್ದಾರೆ.
ಮೃತದೇಹವನ್ನು ಬೆಳ್ತಂಗಡಿ ತಾಲೂಕು ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದು. ಈ ಬಗ್ಗೆ ವೇಣೂರು ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.







