ಬೆಳ್ತಂಗಡಿ: ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷರಾಗಿದ್ದ ಕನ್ಯಾಡಿಯ ಕೇಶವ ಎಂ.ಮುಗೇರ ಇವರು ಹೃದಯಾಘಾತದಿಂದ ಏ.16 ರಂದು ನಿಧನರಾಗಿದ್ದಾರೆ.
ಕೇಶವ ಎಂ.ಮುಗೇರ ಇವರು ಹಲವಾರು ಸಂಘ ಸಂಸ್ಥೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು , ಸಮಾಜಸೇವೆಯಲ್ಲಿ ಮುಂಚೂಣಿಯಲ್ಲಿದ್ದರು. ಮೃತರು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಕೇಶವ ಎಂ ಮುಗೇರ ಅವರ ಪಾರ್ಥೀವ ಶರೀರ ಮಂಗಳೂರಿನಿಂದ ಸ್ವಗೃಹಕ್ಕೆ ಸಂಜೆ 5ಗಂಟೆಗೆ ಬರಲಿದ್ದು, ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ಇದೆ. ನಂತರ ಉಜಿರೆ ರುದ್ರಭೂಮಿಯಲ್ಲಿ ಅಂತಿಮ ವಿಧಿವಿಧಾನ ನಡೆಯಲಿದೆ.




