ಬೈಂದೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ (ರಿ )ಬೈಂದೂರು ತಾಲೂಕು ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಬೈಂದೂರು ತಾಲೂಕು, ಪರಮಪೂಜ್ಯ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಮತ್ತು ಮಾತೃಶ್ರೀ ಹೇಮಾವತಿ ವೀ ಹೆಗ್ಗಡೆಯವರ ಶುಭಆಶೀರ್ವಾದಗಳೊಂದಿಗೆ ಪಡುಕೋಣೆ ವಲಯದ ಸತ್ಯನಾರಾಯಣ ಪೂಜೆ ಹಾಗೂ ಭಜನೋತ್ಸವ ಕಾರ್ಯಕ್ರಮ ನಾಡ ಸೀತಾರಾಮ ಕಲ್ಯಾಣ ಮಂಟಪದಲ್ಲಿ ನೆರವೇರಿಸಲಾಯಿತು .
ಸಭೆಯ ಅಧ್ಯಕ್ಷರಾಗಿ ಶರತ್ ಕುಮಾರ್ ಶೆಟ್ಟಿ ಬೆಳ್ಳಾಡಿ, ಅಧ್ಯಕ್ಷರು ಶ್ರೀ ಸತ್ಯನಾರಾಯಣ ಪೂಜ ಸಮಿತಿ ಪಡುಕೋಣೆ ವಲಯ ವಹಿಸಿದ್ದರು.
ಉದ್ಘಾಟನೆ ಯನ್ನ ಶ್ರೀಮತಿ ನಾಗರತ್ನ ಹೆಗಡೆ ಜಿಲ್ಲಾ ನಿರ್ದೇಶಕರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ದಿ ಯೋಜನೆ ಬಿ. ಸಿ ಟ್ರಸ್ಟ್ ( ರಿ) ಉತ್ತರಕನ್ನಡ ಜಿಲ್ಲೆ, ನೆರವೇರಲಿ ಕಾರ್ಯಕ್ರಮ ದ ಬಗ್ಗೆ ಪ್ರಸಂಶನೀಯ ಮಾತುಗಳಾಡಿದರು.
ಮುಖ್ಯ ಅತಿಥಿಗಳಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ತಿನ ರಾಜ್ಯ ಉಪಾಧ್ಯಕ್ಷರು ರಾಜೇಂದ್ರ ಕುಮಾರ್ ಬಸ್ರೂರು ರವರು 28ನೇ ವರ್ಷದ ಭಜನಾ ಕಮ್ಮಟದ ಸಂಪೂರ್ಣವಾದ ಮಾಹಿತಿಯನ್ನು ನೀಡಿದರು.
ಶ್ರೀ ಸತೀಶ್ ಎಮ್ ನಾಯಕ್ ಸದಸ್ಯರು ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರು ಉಡುಪಿ, ಶ್ರೀಮತಿ ವಿನಯ ಮಂಜುನಾಥ್ ಪೂಜಾರಿ ಉದ್ಯಮಿಗಳು ಎಂ.ಎಂ ಲ್ಯಾಂಡ್ರಿ ದುಬೈ, ದಯಾನಂದ ಬಳೆಗಾರ, ಸದಸ್ಯರು ತಾಲೂಕು ಜನಜಾಗೃತಿ ವೇದಿಕೆ, ರಘುರಾಮ್ ಕೆ ಪೂಜಾರಿ ಗೌರವ್ಯಾಧ್ಯಕ್ಷರು ಶ್ರೀ ಮಂಜುನಾಥೇಶ್ವರ ಭಜನ ಪರಿಷತ್ ಬೈಂದೂರು ತಾಲೂಕು, ರವೀಂದ್ರ ಜೋಗಿ ನಾಡ, ಅಧ್ಯಕ್ಷರು ಶ್ರೀ ವನಯಕ್ಷಿ ದೇವಸ್ಥಾನ ನಾಡ ಗುಡಿ ಅಂಗಡಿ, ಸಂಜಯ್ ನಾಯ್ಕ್ ಯೋಜನಾಧಿಕಾರಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ
ಯೋಜನೆ, ಬಿ.ಸಿ ಟ್ರಸ್ಟ್(ರಿ )ಬೈಂದೂರು ತಾಲೂಕು, ವಾಸು ಮೇಸ್ತ ಅಧ್ಯಕ್ಷರು ಕೇಂದ್ರ ಸಮಿತಿ ಅಧ್ಯಕ್ಷರು, ಪ್ರಗತಿ ಬಂದು ಸ್ವಸಹಾಯ ಸಂಘಗಳ ಒಕ್ಕೂಟ ಬೈಂದೂರು ತಾಲೂಕು, ಚಂದ್ರ ಪೂಜಾರಿ ವಲಯ ಅಧ್ಯಕ್ಷರು ಪಡುಕೋಣೆ, ಕೃಷ್ಣ ಪೂಜಾರಿ ಅಧ್ಯಕ್ಷರು ಶ್ರೀ ಮಂಜುನಾಥೇಶ್ವರ ಭಜನೆ ಪರಿಷತ್ ಬೈಂದೂರ್ ತಾಲೂಕು, ಮಂಜುನಾಥ್ ಹೊಸಾಡ್ ಶ್ರೀ ಮಂಜುನಾಥೇಶ್ವರ ಭಜನ ಪರಿಷತ್ ಪಡುಕೋಣೆ ವಲಯದ ಸಂಯೋಜಕರು, ಉಡುಪಿ ಜಿಲ್ಲಾ ಸಮನ್ವಯಾಧಿಕಾರಿ ರವೀಂದ್ರ ಎಸ್ ಬಸ್ರೂರು , ತಾಲೂಕಿನ ಎಲ್ಲ ವಲಯದ ಭಜನಾ ಪರಿಷತ್ ಸಂಯೋಜಕರು, ಕೃಷ್ಣ ಎಮ್ ಪ್ರಭಾರ ಮೇಲ್ವಿಚಾರಕರು ಪಡುಕೋಣೆ ವಲಯ , ಲಕ್ಷ್ಮಿ, ಭರತ್, ವಿಜಯ್ ಹಾಗೂ ಪಡುಕೋಣೆ ವಲಯದ ಸೇವಾ ಪ್ರತಿನಿಧಿಗಳು, ಒಕ್ಕೂಟದ ಅಧ್ಯಕ್ಷರುಗಳು ಪದಾಧಿಕಾರಿಗಳು, ವಿಪತ್ತು ನಿರ್ವಹಣಾ ಘಟಕದ ಸದಸ್ಯರು, ಪ್ರಗತಿ ಬಂದು ಸ್ವಸಹಾಯ ಸಂಘಗಳ ಸದಸ್ಯರು ಉಪಸ್ಥಿರಿದರು.600 ಕ್ಕೂ ಹೆಚ್ಚಿನ ಭಜಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಯಾಗಿಸಿದರು.




