ಕಲ್ಮಂಜ : ಕಲ್ಮಂಜ ಗ್ರಾಮದ ಬನದಬೈಲು ನಿವಾಸಿ “ನಿಶ್ಚಲ್ ಗೌಡ” ಅವರು ಸುಳ್ಯದಲ್ಲಿ ನಡೆದ ಜಿಲ್ಲಾಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು, ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ದಿನೇಶ್ ಗೌಡ ಸುಶ್ಮಿತಾ ಗೌಡ ದಂಪತಿಗಳ ಪುತ್ರರಾಗಿರುವ ನಿಶ್ಚಲ್ ಗೌಡ ಇವರು ಸ.ದ.ಕ.ಜಿ.ಪಂ.ಹಿ.ಪ್ರಾ. ಶಾಲೆ, ಕಲ್ಮಂಜ-ನಿಡಿಗಲ್ ಇಲ್ಲಿ 09ನೇ ತರಗತಿಯ ವಿದ್ಯಾರ್ಥಿಯಾಗಿದ್ದಾರೆ.

ಯೋಗಾಸನ ಸ್ಪರ್ಧೆಯಲ್ಲಿ ಜಿಲ್ಲಾಮಟ್ಟದಲ್ಲಿ ಪ್ರಥಮ ಸ್ಥಾನ ಅಲಂಕರಿಸಿದ ನಿಶ್ಚಲ್ ಗೌಡ ಇವರನ್ನು ಶಾಲಾಧ್ಯಪಕರು, ಆಡಳಿತ ಮಂಡಳಿ, ಕುಟುಂಬಸ್ಥರು ಹಾಗೂ ಊರವರು ಅಭಿನಂದಿಸಿದ್ದಾರೆ.







