ಮೂಡುಬಿದಿರೆ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯಲಿರುವ 28ನೇ ವರ್ಷದ ಭಜನಾ ಕಮ್ಮಟದ ಪೂರ್ವಭಾವಿ ಸಭೆಯು ಮೂಡುಬಿದಿರೆಯ ಯೋಜನಾ ಕಛೇರಿಯ ಸಭಾಂಗಣದಲ್ಲಿ ನಡೆಯಿತು. ಸಭಾಧ್ಯಕ್ಷತೆಯನ್ನು ಕೃಷ್ಣ ಕುಲಾಲ್ ಕಲ್ಲಮುಂಡ್ಕೂರು ವಹಿಸಿದ್ದರು.

ತಾಲೂಕು ಯೋಜನಾಧಿಕಾರಿಗಳಾದ ಧನಂಜಯ ಬಿ ರವರು ಪ್ರಾಸ್ತಾವಿಕವಾಗಿ ಪೂಜ್ಯರು ಭಜನಾ ಮಂಡಳಿ, ಮಂದಿರಗಳಿಗೆ ನೀಡಿರುವ ಅನುದಾನ ಹಾಗೂ ಅಭಿವೃದ್ದಿ ಚಟುವಟಿಕೆಗಳ ಬಗ್ಗೆ ಮಾತನಾಡಿ ಸರ್ವರನ್ನು ಸ್ವಾಗತಿಸಿದರು.


ಮುಖ್ಯ ಅತಿಥಿಗಳಾಗಿ ಭಜನಾ ಪರಿಷತ್ ರಾಜ್ಯಾಧ್ಯಕ್ಷರಾದ ಚಂದ್ರಶೇಖರ್ ಸಾಲ್ಯಾನ್ ರವರು ಸಂಘಟನಾತ್ಮಕವಾಗಿ ಭಜನಾ ಪರಿಷತ್ ಬೆಳವಣಿಗೆ ಮಾಡುವ ಬಗ್ಗೆ ಮಾಹಿತಿ ನೀಡಿದರು. ಭಜನಾ ಪರಿಷತ್ ಜಿಲ್ಲಾ ಸಮನ್ವಯಾಧಿಕಾರಿ ಸಂತೋಷ್ ಪಿ ಅಳಿಯೂರು ರವರು ಭಜನಾ ಕಮ್ಮಟದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.

ಗೌರವಾಧ್ಯಕ್ಷರಾ ಅಶೋಕ್ ನಾಯ್ಕ್ ರವರು ಶುಭ ಹಾರೈಸಿದರು. ತಾಲೂಕಿನ ವಿವಿಧ ಭಜನಾ ಮಂಡಳಿಗಳ ಪ್ರಮುಖರು ಉಪಸ್ಥಿತರಿದ್ದರು.ಕಛೇರಿ ಸಹಾಯಕಿ ನಯನ ಜೈನ್ ಧನ್ಯವಾದವಿತ್ತರು. ತಾಲೂಕು ವಿಚಕ್ಷಣಾಧಿಕಾರಿ ವಸಂತ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು.






