ಕಾರ್ಕಳ: ದಿನಾಂಕ 06 09- 2026ರಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಕಚೇರಿಯ ಸಭಾಂಗಣದಲ್ಲಿ ಶ್ರೀ ಮಂಜುನಾಥೆಶ್ವರ ಭಜನಾ ಪರಿಷತ್ತಿನ ಪದಾಧಿಕಾರಿಗಳ ಭಜನಾ ಕಮ್ಮಟ ಪೂರ್ವಭಾವಿ ಸಭೆ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ತಾಲೂಕು ಅಧ್ಯಕ್ಷರಾದಂತಹ ಶ್ರೀ ಹರೀಶ್ ಕಡ್ತಲರವರು ವಹಿಸಿದ್ದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ತಿನ ರಾಜ್ಯ ಅಧ್ಯಕ್ಷರಾದ ಪಿ ಚಂದ್ರಶೇಖರ್ ಸಾಲ್ಯಾನ್ ರವರು ಸಭೆಯನ್ನು ಉದ್ಘಾಟಿಸಿ ಭಜನಾ ಪರಿಷತ್ ಸಂಘಟನೆಯ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದರು.
ಭಜನಾ ಪರಿಷತ್ ಜಿಲ್ಲಾ ಸಮನ್ವಯ ಅಧಿಕಾರಿಯಾದ ಸಂತೋಷ್ ಪಿ ಅಳಿಯೂರು ರವರು ಭಜನಾ ಕಮ್ಮಟದ ಬಗ್ಗೆ ಸಾಧಕ ಪ್ರಶಸ್ತಿ ಹಾಗೂ ಮಂಗಳೋತ್ಸವದ ಬಗ್ಗೆ ಮಾಹಿತಿಯನ್ನು ನೀಡಿದರು. ಯೋಗ ಶಿಕ್ಷಕರಾದ ಶೇಖರ್ ಕಡ್ತಲ ರವರು ಯೋಗ ತರಬೇತಿಯ ಮಾಹಿತಿ ನೀಡಿದರು.

ಕಳೆದ ವರ್ಷದ ಕಮ್ಮಟದ ಶಿಬಿರಾರ್ಥಿ ಶ್ರೀ ಗೋಪಾಲಕೃಷ್ಣ ಭಜನಾ ಮಂಡಳಿಯ ಉತ್ತಮ್ ಅನಿಸಿಕೆಯನ್ನು ತಿಳಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿರುವ ಹರೀಶ್ ಕಡ್ತಲ ರವರು ಭಜನಾ ಪರಿಷತ್ ನ ಸಾಧನೆಯನ್ನು ಮಂಡಿಸಿ. ಹೆಚ್ಚಿನ ಸಂಖ್ಯೆಯಲ್ಲಿ ಭಜನಾ ಕಮ್ಮಟಕ್ಕೆ ಶಿಬಿರಾರ್ಥಿ ಗಳು ಭಾಗವಹಿಸಬೇಕಾಗಿ ತಿಳಿಸಿದರು.ಭಜನಾ ಪರಿಷತ್ ಮುಖಾಂತರ ಮಾಡಿರುವ ಅನೇಕ ಸಾಧನೆಗಳಿಗೆ ಸಹಕಾರವಿತ್ತ ಭಜಕರಿಗೆ ವಿಶೇಷ ಅಭಿನಂದನೆಗಳನ್ನು ತಿಳಿಸಿದರು.
ಸಭೆಯಲ್ಲಿ ಯೋಗ ಶಿಕ್ಷಕರರಾದ ಶೇಖರ್ ಕಡ್ತಲ, ಸಹಾಯಕ ಪ್ರಬಂಧಕಾರದ ಶ್ರೀಮತಿ ಸೌಮ್ಯರವರು ಮೇಲ್ವಿಚಾರಕರಾದ ಶ್ರೀಮತಿ ಗೀತಾ ಕಾರ್ಯಕ್ರಮ ನಿರೂಪಿಸಿದರು , ತಾಲೂಕು ಕಾರ್ಯದರ್ಶಿ ಸುಕೇಶ್ ಸಾಣೂರು ಧನ್ಯವಾದವಿತ್ತರು, ಭಜನಾ ಮಂಡಳಿಗಳ ಪದಾಧಿಕಾರಿಗಳು, ತಾಲೂಕಿನ ಎಲ್ಲಾ ಪದಾಧಿಕಾರಿಗಳು,ವಲಯ ಸಂಯೋಜಕರು,ಭಜಕರು ಉಪಸ್ಥಿತರಿದ್ದರು.








