ಕಡಬ: ಪರಿಸರ ಸಂರಕ್ಷಣೆ ಹಾಗೂ ಪ್ಲಾಸ್ಟಿಕ್ ಬಳಕೆಯ ದುಷ್ಪರಿಣಾಮಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ‘ಇಂದು ಪ್ಲಾಸ್ಟಿಕ್ ಮುಕ್ತ – ಆರೋಗ್ಯಕರ ನಾಳೆ’ ಎಂಬ ಸಂದೇಶದೊಂದಿಗೆ ಕಡಬದಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮ ಹಾಗೂ ಮೆರವಣಿಗೆ ನಡೆಯಿತು.

ಕಾರ್ಯಕ್ರಮದಲ್ಲಿ ಸ್ವಚ್ಛ, ಹಸಿರು ಹಾಗೂ ಆರೋಗ್ಯಕರ ಪರಿಸರ ನಿರ್ಮಾಣಕ್ಕೆ ಪ್ರತಿಯೊಬ್ಬ ವ್ಯಕ್ತಿಯ ಸಹಭಾಗಿತ್ವದ ಅಗತ್ಯವನ್ನು ಸಾರಲಾಯಿತು.
ಕಡಬದ ಜೆಎಂಜೆ ಆಸ್ಪತ್ರೆಯಿಂದ ಕಾರ್ಯಕ್ರಮ ಆರಂಭಗೊಂಡಿತು. ಬಳಿಕ ಜೆಎಂಜೆ ಆಸ್ಪತ್ರೆಯಿಂದ ಚಾಚಾ ಬಿಲ್ಡಿಂಗ್ ಹಾಗೂ ಕರ್ನಾಟಕ ಬ್ಯಾಂಕ್ ಎದುರಿನವರೆಗೆ ಜಾಗೃತಿ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಪರಿಸರ ಸಂರಕ್ಷಣೆ, ಪ್ಲಾಸ್ಟಿಕ್ ಬಳಕೆ ತ್ಯಜಿಸುವುದು, ನೀರು ಮತ್ತು ವಿದ್ಯುತ್ ಉಳಿತಾಯ ಸೇರಿದಂತೆ ವಿವಿಧ ಜಾಗೃತಿ ಸಂದೇಶಗಳನ್ನು ಸಾರಲಾಯಿತು.
ಕಾರ್ಯಕ್ರಮದ ಅಂಗವಾಗಿ ಜೆಎಂಜೆ ಆಸ್ಪತ್ರೆಯ ಮಕ್ಕಳಿಂದ ವಿಶೇಷ ನೃತ್ಯ ಪ್ರದರ್ಶನ ನಡೆಯಿತು. ಪರಿಸರ ಸಂರಕ್ಷಣೆ ಹಾಗೂ ಪ್ಲಾಸ್ಟಿಕ್ ಮುಕ್ತ ಸಮಾಜದ ಸಂದೇಶವನ್ನು ಮನಮುಟ್ಟುವಂತೆ ಬಿಂಬಿಸುವ ನೃತ್ಯ ಪ್ರದರ್ಶನ ಗಮನ ಸೆಳೆಯಿತು.
ಅದೇ ರೀತಿ ನೆಲ್ಯಾಡಿಯ ಎಸ್ಟಿಜಿ ಕಾಲೇಜಿನ ವಿದ್ಯಾರ್ಥಿಗಳಿಂದ ಬೀದಿ ನಾಟಕ, ನೃತ್ಯ ಪ್ರದರ್ಶನಗಳು ನಡೆಯಿತು. ಪ್ಲಾಸ್ಟಿಕ್ ಬಳಕೆಯಿಂದ ಪರಿಸರ, ಜಲಮೂಲಗಳು, ಪ್ರಾಣಿ-ಪಕ್ಷಿಗಳು ಹಾಗೂ ಮಾನವನ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳನ್ನು ಬೀದಿ ನಾಟಕದ ಮೂಲಕ ಮತ್ತು ಸಭೆಯಲ್ಲಿ ನೆರೆದ ಅತಿಥಿಗಳ ಸಂದೇಶಗಳೊಂದಿಗೆಗೆ ಪರಿಣಾಮಕಾರಿಯಾಗಿ ಮನವರಿಕೆ ಮಾಡಿಕೊಡಲಾಯಿತು.
ಸಾರ್ವಜನಿಕರ ಗಮನ ಸೆಳೆದ ಈ ಪ್ರದರ್ಶನ ಪರಿಸರ ಕಾಳಜಿಯ ಸಂದೇಶವನ್ನು ಸರಳವಾಗಿ ತಲುಪಿಸುವಲ್ಲಿ ಯಶಸ್ವಿಯಾಯಿತು.
ಕಾರ್ಯಕ್ರಮದ ವೇದಿಕೆಯಲ್ಲಿ ಕಡಬ ಪಟ್ಟಣ ಪಂಚಾಯತ್ ಅಧ್ಯಕ್ಷೆ ತಮನ್ನಾ ಜಬೀನ್,ಸೈಂಟ್ ಜೋಕಿಮ್ಸ್ ಚರ್ಚ್ ಕಡಬ ಧರ್ಮಗುರುಗಳಾದ ರೆ.ಫಾ. ಪೌಲ್ ಪ್ರಕಾಶ್, ಸಂತ ಮೇರಿಸ್ ಚರ್ಚ್ ಕುಂತೂರು ಇಲ್ಲಿನ ಧರ್ಮಗುರುಗಳಾದ
ರೆ.ಫಾ. ಪಿ.ಕೆ. ಅಬ್ರಹಾಂ.
ಕೋರ್ ಎಪಿಸ್ಕೋಪಾ, ಪಂಜ ವಲಯ ಅರಣ್ಯಧಿಕಾರಿ ಶ್ರೀ ಉಮೇಶ್ ಕೆ.ಜೆ.
ಪತ್ರಕರ್ತರಾದ
ಶ್ರೀ ನಾಗರಾಜ್ ಎನ್.ಕೆ., ಪ್ರಕಾಶ್ ಕೋಡಿಂಬಾಳ,
ಕಡಬದ ಕೌನ್ಸಿಲರ್
ಶ್ರೀ ಸೈಮನ್ ಸಿ.ಜೆ
ಜೆಸಿಐ ಅಧ್ಯಕ್ಷ
ಜೇಮ್ಸ್ ಕ್ರಿಶಲ್ ಡಿಸೋಜಾ, ಟೀಮ್ ಅಧೀರ ತಂಡದ ಶ್ರೀ ಸಚಿನ್,
ಜೆ.ಎಂ.ಜೆ. ಕಾನ್ವೆಂಟ್ನ ಅಧೀಕ್ಷಕರಾದ
ಸಿಸ್ಟರ್ ರೋಸಾ ಕುಟ್ಟಿ
ಕಡಬ ಲೈಟ್ನಿಂಗ್ ಕ್ಲಬ್ ನ ಸದಸ್ಯರಾದ ಕ್ಷೇವಿಯರ್ ಬೇಬಿ, ಸಾಮಾಜಿಕ ಕಾರ್ಯಕರ್ತ ಹಾಗೂ ಯೂ ಟ್ಯೂಬರ್ ಮಹಮ್ಮದ್ ಅಲಿ, ಜೆ.ಎಂ.ಜೆ ಆಸ್ಪತ್ರೆ ಆಡಳಿತಾಧಿಕಾರಿ ಸಿಸ್ಟರ್ ಶಿಜಿ ಜಾರ್ಜ್, ಶ್ರೀ ಜಯಗುರು ಕಲ್ಲಾಜೆ,ಜೆ.ಎಂ.ಜೆ. ಆಸ್ಪತ್ರೆ ಸಾರ್ವಜನಿಕ ಸಂಪರ್ಕಧಿಕಾರಿ ರಂಜಿತ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
ಪ್ಲಾಸ್ಟಿಕ್ ತ್ಯಾಜ್ಯವು ಮಣ್ಣು, ನೀರು ಹಾಗೂ ಜೀವಜಾಲದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಬಳಸಿ ಬಿಸಾಡುವ ಪ್ಲಾಸ್ಟಿಕ್ ವಸ್ತುಗಳು ಚರಂಡಿ ಮತ್ತು ಜಲಮೂಲಗಳನ್ನು ಕಲುಷಿತಗೊಳಿಸುವುದರ ಜೊತೆಗೆ ಪ್ರಾಣಿ-ಪಕ್ಷಿಗಳಿಗೂ ಅಪಾಯವನ್ನುಂಟು ಮಾಡುತ್ತಿವೆ. ಪ್ಲಾಸ್ಟಿಕ್ ಸುಡುವುದರಿಂದ ವಾಯುಮಾಲಿನ್ಯ ಉಂಟಾಗಿ ಸಾರ್ವಜನಿಕ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುವ ಸಾಧ್ಯತೆಯಿದೆ. ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವುದು, ಮರುಬಳಕೆ ಮಾಡಬಹುದಾದ ಚೀಲಗಳನ್ನು ಬಳಸುವುದು, ತ್ಯಾಜ್ಯವನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವುದು ಹಾಗೂ ನೀರು-ವಿದ್ಯುತ್ ಉಳಿತಾಯ ಮಾಡುವ ಮೂಲಕ ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆಗೆ ಕೊಡುಗೆ ನೀಡಬೇಕು ಎಂದು ವೇದಿಕೆಯಲ್ಲಿದ್ದ ಗಣ್ಯರು ಅಭಿಪ್ರಾಯಪಟ್ಟರು.
ಜೆ.ಎಂ.ಜೆ. ಆಸ್ಪತ್ರೆ, ಕಡಬ ವತಿಯಿಂದ ಆಯೋಜಿಸಲಾದ ಸ್ವಚ್ಛ, ಹಸಿರು ಹಾಗೂ ಆರೋಗ್ಯಕರ ನಾಳೆಗಾಗಿ ನಡೆದ ಈ ಜಾಗೃತಿ ಕಾರ್ಯಕ್ರಮದಲ್ಲಿ ಕಡಬದ ವಿವಿಧ ಸಂಘ-ಸಂಸ್ಥೆಗಳು, ಸಾಮಾಜಿಕ ಕಾರ್ಯಕರ್ತರು, ಮಾಧ್ಯಮ ಮಿತ್ರರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಕಡಬ ಕೆಸಿಎಲ್ಸಿ ಕ್ಲಬ್ನ ಸದಸ್ಯರು, ಕ್ನಾನಾಯ ಜ್ಯೋತಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ಕಡಬದ ಸಿಸ್ಟರ್ ಗಳು ಹಾಗೂ ಸಂತ ಜೋಕಿಮ್ಸ್ ಚರ್ಚ್ ಸದಸ್ಯರು ಸೇರಿದಂತೆ ಹಲವು ಗಣ್ಯರು,
ಜೆ.ಎಂ.ಜೆ. ಆಸ್ಪತ್ರೆಯ ಸಿಬ್ಬಂದಿಗಳು ಹಾಗೂ ಎಸ್.ಟಿ. ಜಿ ಕಾಲೇಜ್ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಬೆಂಬಲ ನೀಡಿದರು. ಅನಿಶ್ ಲೋಬೊ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.





