ಕಾಶಿಪಟ್ಣ: ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ (ರಿ.) ಕಾಶಿಪಟ್ಣ , ಬ್ರಹ್ಮಶ್ರೀ ನಾರಾಯಣಗುರುಗಳ 172 ನೇ ಜನ್ಮ ಜಯಂತಿಯ ಪ್ರಯುಕ್ತ ಬಿಲ್ಲವ ಸಂಘದ ವಠಾರ, ಕಾಶಿಪಟ್ಣದಲ್ಲಿ

ಅಕ್ಟೋಬರ್.11 ರಂದು ಬೆಳಿಗ್ಗೆ ಗಂಟೆ 10:00 ಕ್ಕೆ ಗಣಹೋಮ, 11:00 ಗಂಟೆಗೆ ಗುರುಪೂಜೆ, ಮಧ್ಯಾಹ್ನ 12:30 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ಜರುಗಲಿದೆ.


ಕಾರ್ಯಕ್ರಮಕ್ಕೆ ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ (ರಿ.) ಕಾಶಿಪಟ್ಣದ ಅಧ್ಯಕ್ಷರಾದ ಪಿ.ಕೆ.ರಾಜು ಪೂಜಾರಿ, ಕಾರ್ಯದರ್ಶಿ ಸತೀಶ್ ಕೆ, ಕೋಶಾಧಿಕಾರಿ ವಸಂತ್ ಕೋಟ್ಯಾನ್ , ಜೊತೆ ಕಾರ್ಯದರ್ಶಿ ನಾರಾಯಣ ಸಾಲ್ಯಾನ್ ಮತ್ತು ಸಮಿತಿಯ ಸರ್ವ ಸದಸ್ಯರು ಹಾಗೂ ಬಿಲ್ಲವ ಸಮಾಜ ಬಾಂಧವರು ಆತ್ಮೀಯವಾಗಿ ಆದರದ ಸ್ವಾಗತ ಬಯಸಿದ್ದಾರೆ.





