ಬೆಳ್ತಂಗಡಿ: ಇತ್ತೀಚೆಗೆ ಬೆಳ್ತಂಗಡಿ ತಾಲೂಕಿನ ನಾವೂರು ಎಂಬಲ್ಲಿ ವೈದ್ಯಕೀಯ ವೃತ್ತಿಯೊಂದಿಗೆ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದ ಡಾ. ಪ್ರದೀಪ್ ನಾವೂರ ಇವರ ಕ್ಲಿನಿಕ್ ಇರುವ ಕಟ್ಟಡಕ್ಕೆ ರಾತ್ರೆ ಹೊತ್ತಿನಲ್ಲಿ ದುಷ್ಕರ್ಮಿಗಳು ಬೆಂಕಿ ಹಚ್ಚಿ ಕ್ಲಿನಿಕ್ ನ ವೈದ್ಯಕೀಯ ಉಪಕರಣಗಳು, ಲ್ಯಾಬ್ ಗೆ ಸಂಬಂಧಪಟ್ಟ ಉಪಕರಣಗಳು,ಪೀಠೋಪಕರಣಗಳು ಇತ್ಯಾದಿ ಅಮೂಲ್ಯ ವಸ್ತುಗಳನ್ನು ನಾಶಗೊಳಿಸಿದ್ದಾರೆ.

ಇಂತಹ ಹೇಯ ಕೃತ್ಯವನ್ನು ಖಂಡಿಸಿ ವೈದ್ಯಕೀಯ ಸಂಘಟನೆಗಳಾದ ಆಯುಷ್ ಫೆಡರೇಶನ್ ಆಫ್ ಇಂಡಿಯಾ ( AFI), ಇಂಡಿಯನ್ ಮೆಡಿಕಲ್
ಅಸೋಸಿಯೇಷನ್( IMA), ಇಂಡಿಯನ್ ಡೆಂಟಲ್ ಅಸೋಶಿಯೇಶನ್( IDA) ನ ಸದಸ್ಯರು ಬೆಳ್ತಂಗಡಿಯಲ್ಲಿ ಸಭೆ ಸೇರಿ
ತಾಲೂಕು ವೈದ್ಯಾಧಿಕಾರಿಗಳು ,ಬೆಳ್ತಂಗಡಿ ತಹಸೀಲ್ದಾರರು ಮತ್ತು DYSP ಬೆಳ್ತಂಗಡಿಯವರಿಗೆತಮ್ಮ ಅಹವಾಲನ್ನು
ಸಲ್ಲಿಸಿ ತಪ್ಪಿತಸ್ಥರನ್ನು ಶೀಘ್ರದಲ್ಲಿ ಪತ್ತೆ ಹಚ್ಚಿ ಕಠಿಣಕ್ರಮಕೈಗೊಳ್ಳುವಂತೆ ವಿನಂತಿಸಲಾಯಿತು.
ಈ ಸಂದರ್ಭದಲ್ಲಿ ಎಲ್ಲ ಸಂಘಟನೆಗಳ ಪ್ರಮುಖರಾದ ಜಿಲ್ಲಾ AFI ಅಧ್ಯಕ್ಷ ಡಾ.ಕೃಷ್ಣ ಎಂ ಗೋಖಲೆ, ತಾಲೂಕು AFI
ಅಧ್ಯಕ್ಷೆ ಡಾ. ಸುಷ್ಮಾ ಡೊoಗ್ರೆ , IMA ಯ ತಾಲೂಕು ಅಧ್ಯಕ್ಷೆ ಡಾ.ಸ್ವರ್ಣಲತಾ, ಡಾ.ರಜತ್, IDA ಯ ಡಾ .ರಾಘವೇಂದ್ರ
ಪಿದಮಲೆ,

ಡಾ.ಶಶಿಧರ್ ಡೋಂಗ್ರೆ, ಬೆನಕ ಆಸ್ಪತ್ರೆಯ ಡಾ.ಗೋಪಾಲಕೃಷ್ಣ, ಅಭಯ ಆಸ್ಪತ್ರೆಯ ಡಾ.ಶ್ರೀಹರಿ ಭಟ್
ಹಾಗೂ ತಾಲೂಕಿನ ಅನೇಕ ಹಿರಿಯ ಮತ್ತು ಕಿರಿಯ ವೈದ್ಯರು ಹಾಜರಿದ್ದರು.

ಎಲ್ಲ ಅಧಿಕಾರಿಗಳು ನಮ್ಮ ಅಹವಾಲಿಗೆ ಸ್ಪಂದಿಸಿ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ತಮ್ಮ ಸಂಪೂರ್ಣ ಬೆಂಬಲ
ಹಾಗೂ ಸಹಕಾರದ ಭರವಸೆಯನ್ನು ನೀಡಿರುತ್ತಾರೆ.





