ಗಂಡಿಬಾಗಿಲು: ಸಿಯೋನ್ ಆಶ್ರಮ(ರಿ.) ಗಂಡಿಬಾಗಿಲು ಇಲ್ಲಿ ದಿನಾಂಕ:10.10.2026ರಂದು ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯನ್ನು ಆಚರಿಸಲಾಯಿತು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಆಡಳಿತಾಧಿಕಾರಿ ಶ್ರೀಮತಿ ಶೋಭಾ ಯು.ಪಿ.ಯವರು ವಹಿಸಿಕೊಂಡಿದ್ದರು.
ಸಿಯೋನ್ ಸಂಸ್ಥೆಯ ವೈದ್ಯಾಧಿಕಾರಿ ಶ್ರೀಯುತ ಡಾ.ಶಿವಾನಂದ ಸ್ವಾಮಿಯವರು, ಒಬ್ಬ ವ್ಯಕ್ತಿಗೆ ಮಾನಸಿಕ ಕಾಯಿಲೆ ಬರಬಹುದಾದ ಸಾಧ್ಯತೆಗಳ ಕಾರಣಗಳು, ವಿಧಗಳು, ಲಕ್ಷಣಗಳು, ಪರಿಹಾರಗಳನ್ನು ವಿವರಿಸಿ, ದೈಹಿಕವಾಗಿ ನಾವೆಷ್ಟೇ ಆರೋಗ್ಯವಾಗಿದ್ದರೂ, ನಮ್ಮ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳದಿದ್ದರೆ ಎಲ್ಲವೂ ಶೂನ್ಯ. ನಮ್ಮ ಜೀವನದಲ್ಲಿ ನಾವು ಸದೃಢರಾಗಿರಬೇಕೆಂದರು.
ಮಾನಸಿಕ ಕಾಯಿಲೆಯ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಲು ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿಯನ್ನು ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತಿದೆ. ದೈಹಿಕ ಆರೋಗ್ಯದಷ್ಟೇ ಮಾನಸಿಕ ಆರೋಗ್ಯವೂ ಮುಖ್ಯ. ಮಾನಸಿಕ ಆರೋಗ್ಯವಿಲ್ಲದಿದ್ದರೆ ಒಬ್ಬ ಮನುಷ್ಯ ನೆಮ್ಮದಿಯಾಗಿ, ಸುಖವಾಗಿ ಬಾಳಲು ಸಾಧ್ಯವಿಲ್ಲ. ಇದಕ್ಕೆ ಧ್ಯಾನ ಮತ್ತು ದೈವಿಕ ಶಕ್ತಿಯು ಮುಖ್ಯ ಪಾತ್ರ ವಹಿಸುತ್ತದೆ. ಪ್ರೀತಿ ಮತ್ತು ತಿಳುವಳಿಕೆಯಿಂದ ಪರಸ್ಪರರ ಮಾನಸಿಕ ಆರೋಗ್ಯವನ್ನು ಬೆಂಬಲಿಸೋಣ ಎಂದರು.

ಸಂಸ್ಥೆಯ ಟ್ರಸ್ಟೀ ಸದಸ್ಯರಾದ ಶ್ರೀಮತಿ ಮೇರಿ ಯು.ಪಿ.ಯವರು, ಸಿಯೋನ್ ಚಾಪ್ಲಿಯನ್ ರೆ.ಫಾ.ಡಾ.ಮೆಲ್ವಿನ್ ಡಿ’ಸಿಲ್ವರವರು, ಶ್ರೀನಿವಾಸ್ ಕಾಲೇಜ್ ಆಫ್ ನರ್ಸಿಂಗ್ ಸೈನ್ಸ್ ಮಂಗಳೂರಿನ ಉಪನ್ಯಾಸಕರಾದ ಮಿರಿಯಂ ಜೇಕಬ್, ಸಿಯೋನ್ ಸಂಸ್ಥೆಯ ಸಿಬ್ಬಂದಿ ದಾದಿ ಶ್ರೀಮತಿ ಮಿಷಾ ಕುರಿಯನ್, ಆಶ್ರಮ ನಿವಾಸಿಯಾದ ರಾಜುರವರು ವೇದಿಕೆಯನ್ನಲಂಕರಿಸಿದ್ದರು.

ಸಂಸ್ಥೆಯ ಆಡಳಿತ ಮಂಡಳಿಯವರು, ಸಿಬ್ಬಂದಿವರ್ಗದವರು, ಶ್ರೀನಿವಾಸ್ ಕಾಲೇಜ್ ಆಫ್ ನರ್ಸಿಂಗ್ ಸೈನ್ಸ್ನ ವಿದ್ಯಾರ್ಥಿಗಳು, ಆಶ್ರಮನಿವಾಸಿಗಳೆಲ್ಲರೂ ಉಪಸ್ಥಿತರಿದ್ದರು. ಶ್ರೀನಿವಾಸ್ ಕಾಲೇಜ್ ಆಫ್ ನರ್ಸಿಂಗ್ ಸೈನ್ಸ್ ಮಂಗಳೂರಿನ ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ಆಯೋಜಿಸಿದ್ದು, ವಿವಿಧ ಮನೋರಂಜನಾ ಕಾರ್ಯಕ್ರಮಗಳನ್ನು ನೀಡಿ ಮನರಂಜಿಸಿದರು.





