ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾ ಸಾಂಸ್ಕೃತಿಕ ಉತ್ಸವದ ಅಂಗವಾಗಿ ಕರ್ನಾಟಕ ರಾಜ್ಯ ಕಲಾವಿದರ ರಕ್ಷಣಾ ವೇದಿಕೆ (ರಿ.), ಬೆಂಗಳೂರು
ಇವರಿಂದ ಆಯೋಜಿಸಲಾಗಿದ್ದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಉದಯೋನ್ಮುಖ ಪ್ರತಿಭೆ ಮಾನ್ವಿ ಎಸ್. ಪೂಜಾರಿ ಅವರಿಗೆ ಪ್ರತಿಷ್ಠಿತ “ಶ್ರೀ ಚಾಮುಂಡೇಶ್ವರಿ ಸದ್ಭಾವನಾ ರಾಷ್ಟ್ರ ಪ್ರಶಸ್ತಿ-2026” ನೀಡಿ ಗೌರವಿಸಲಾಯಿತು.