ಬೆಳ್ತಂಗಡಿ : ರಾಜ ಕೇಸರಿ ಸೇವಾ ಟ್ರಸ್ಟ್ ರಿ ಬೆಳ್ತಂಗಡಿ ತಾಲೂಕು ಇದರ ವತಿಯಿಂದ ರಾಜ ಕೇಸರಿ ಸೇವಾ ಟ್ರಸ್ಟ್ ರಿ ಕರ್ನಾಟಕ ಇದರ ಸಂಸ್ಥಾಪಕರಾದ ದೀಪಕ್ ಜಿ ಬೆಳ್ತಂಗಡಿ ಇವರ ನೇತೃತ್ವದಲ್ಲಿ 588 ನೇ ಸೇವಾ ಯೋಜನೆಯ 3 ವರ್ಷದ ಆಟಿದಕಷಾಯ ಮತ್ತು ಮೆತ್ತೆ ಗಂಜಿ ವಿತರಣಾ ಕಾರ್ಯಕ್ರಮ ಇದೇ ಬರುವ 12.08.2026 ಬುಧವಾರದಂದು ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿ ನಡೆಯಲಿದೆ ಎಂದು ರಾಜ ಕೇಸರಿ ಸೇವಾ ಟ್ರಸ್ಟ್ ಇದರ ಸಂಸ್ಥಾಪಕರಾದ ದೀಪಕ್ ಜಿ ಇವರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಕಾರ್ಯಕ್ರಮದ ಉದ್ಘಾಟನೆಯನ್ನು ರಾಜ ಕೇಸರಿ ಸೇವಾ ಟ್ರಸ್ಟ್ ರಿ ಇದರ ಜಿಲ್ಲಾಧ್ಯಕ್ಷರಾದ ಸಂತೋಷ್ ಕೊಲ್ಯ ಇವರು ಉದ್ಘಾಟಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಶಾಸಕರದ ಹರೀಶ್ ಪೂಂಜ ಅಧ್ಯಕ್ಷ ಸನ್ ವಹಿಸಿಕೊಳ್ಳಲಿದ್ದು ಹಾಗೂ ಈ ಕಾರ್ಯಕ್ರಮದಲ್ಲಿ ಅತಿಥಿಗಳು ಕೂಡ ಭಾಗವಹಿಸಿದ್ದಾರೆ. ಬೆಳಿಗ್ಗೆ 6 ರಿಂದ ಬೆಳಗ್ಗೆ 10 ಗಂಟೆ ತನಕ ಕಾರ್ಯಕ್ರಮ ನಡೆಯಲಿದ್ದು,


ಹೋದ ವರ್ಷ ಕೊಡವು ಒಂದು ಸಾವಿರಕ್ಕಿಂತ ಅಧಿಕ ಸಾರ್ವಜನಿಕರು ಸದುಪಯೋಗಪಡಿಸಿಕೊಂಡಿದ್ದಾರೆ ಎಂದು ಖುಷಿಯಾಗಿ ವ್ಯಕ್ತಪಡಿಸಿದರು.
ಹೋದ ವರ್ಷ ಬೆಳಿಗ್ಗೆ ಆರು ಗಂಟೆಯ ಮೊದಲೇ ಸಾರ್ವಜನಿಕರು ಅವರವರ ಮನೆಗೆ ತೆಗೆದುಕೊಂಡು ಹೋಗಲು ಬಾಟ್ಲಿಗಳನ್ನು ಕೂಡ ಹಿಡಿದುಕೊಂಡು ಬಂದಿದ್ದರು ಎಂದು ಸಂತೋಷಪಡುತ್ತಾ ಈ ಕಾರ್ಯಕ್ರಮ ಮಾಡಲು ನಮಗೆ ಇನ್ನಷ್ಟು ಸ್ಪೂರ್ತಿಯಾಗಿದೆ ಎಂದು ಕೂಡ ತಿಳಿಸಿದ್ದಾರೆ.





