ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿಟ್ಲ ತಾಲೂಕು ವ್ಯಾಪ್ತಿಯ ಕಲ್ಲಡ್ಕ ವಲಯದ ಒಕ್ಕೂಟದ ಪದಾಧಿಕಾರಿಗಳು,ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಪದಾಧಿಕಾರಿಗಳು,ಜನಜಾಗೃತಿ ವೇದಿಕೆ,ಶೌರ್ಯ ವಿಪತ್ತು ತಂಡ ಸೇವಾಪ್ರತಿನಿಧಿಗಳು,ಮಂಡಳಿಯ ಸದಸ್ಯರು ಹಾಗೂ ಗ್ರಾಮದ ಪ್ರಮುಖರು ಹೀಗೆ 65 ಮಂದಿಯ ತಂಡ ಶ್ರೀ ಕ್ಷೇತ್ರದ ಪರಮಪೂಜ್ಯ ಖಾವಂದರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.

ಮಾತೃಶ್ರೀ ಹೇಮಾವತಿ ಹೆಗ್ಗಡೆಯವರು ಮಾರ್ಗದರ್ಶನ ನೀಡಿದರು.ಫಲಪುಷ್ಪಗಳನ್ನು ನೀಡಿ ಗೌರವಿಸಲಾಯಿತು. ಶ್ರೀಮತಿ ಶೃದ್ದಾ ಅಮಿತ್ ರವರ ಭಜನಾ ಪರಿಷತ್ ಕಾರ್ಯಚಟುವಟಿಕೆಗಳ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಶ್ರೀ ಅನಿಲ್ ಕುಮಾರ್ ಎಸ್ ಎಸ್ ರವರು ಉತ್ತಮ ಸಲಹೆಗಳನ್ನು ನೀಡಿದರು.
ಪೂಜ್ಯರ ಆಪ್ತ ಕಾರ್ಯದರ್ಶಿಗಳಾದ ಶ್ರೀ ಎ ವೀರು ಶೆಟ್ಟಿ ಹಾಗೂ ಭಜನಾ ಪರಿಷತ್ ರಾಜ್ಯ ಸಂಚಾಲಕರಾದ ಶ್ರೀ ಜಿ ಸುಬ್ರಹ್ಮಣ್ಯ ಪ್ರಸಾದ್ ರವರು ಕ್ಷೇತ್ರ ಮಾಹಿತಿಗಳನ್ನು ನೀಡಿದರು. ವಲಯ ಮೇಲ್ವಿಚಾರಕರಾದ ಶುಕರಾಜ್ ಭಜನಾ ಪರಿಷತ್ ಜಿಲ್ಲಾ ಸಮನ್ವಯಾಧಿಕಾರಿಗಳಾದ ಸಂತೋಷ್ ಪಿ ಅಳಿಯೂರು ಉಪಸ್ಥಿತರಿದ್ದರು.




