ಬೆಳಾಲು : ಮೈತ್ರಿ ಯುವಕ ಮಂಡಲ (ರಿ.)ಬೆಳಾಲು. ಇದರ ಸಹಯೋಗದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ 22ನೇ ವರ್ಷದ ಮೊಸರು ಕುಡಿಕೆ ಉತ್ಸವದ ಸಮಾರೋಪ ಸಮಾರಂಭ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಸೆ. 06 ರಂದು ಯುವಕ ಮಂಡಲದ ವಠಾರದಲ್ಲಿ ನೆರವೇರಿತು.

ಎಸ್.ಕೆ.ಡಿ.ಆರ್.ಡಿ.ಪಿ ಬಜಪೆ ವಲಯ ಯೋಜನಾಧಿಕಾರಿಗಳಾದ ಗಿರೀಶ್ ಎಂ ಅವರು ಧಾರ್ಮಿಕ ಭಾಷಣ ಗೈದರು. ಜುಬೈರ್ ಅನಂತೋಡಿ ಬೆಳಾಲು, ಡೈನಾ ಪ್ರವೀಣ್ ಪಾರಳ, ಬೆಳಾಲು, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಮೈತ್ರಿ ಯುವಕ ಮಂಡಲ ಅಧ್ಯಕ್ಷರಾದ ನವನೀತ್ ಗೌಡ ಸಭಾಧ್ಯಕ್ಷತೆ ವಹಿಸಿದ್ದರು.
ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಬಾಬು ಆಚಾರ್ಯ ನಾಟಿ ವೈದ್ಯರು, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಶಿಧರ ಆಚಾರ್ಯ ಮಾಯಾ ಶಿಲ್ಪ ಕಲಾ ಕ್ಷೇತ್ರ, ಸುಲೈಮಾನ್ ಭೀಮoಡೆ ಸಾಮಾಜಿಕ ಕ್ಷೇತ್ರ ಗೌರವಾರ್ಪಣೆ ನಡೆಯಿತು.ಯುವಕ ಮಂಡಲ ಗೌರವ ಸಲಹೆಗಾರರಾದ ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷರಾದ ಜತ್ತನ್ನ ಗೌಡ,ಗೌರವಾಧ್ಯಕ್ಷರಾದ ನಿತಿನ್ ಮೋನಿಸ್, ಕಾರ್ಯದರ್ಶಿ ಕಿರಣ್ ಸುವರ್ಣ ವೇದಿಕೆಯಲ್ಲಿದ್ದರು.

ಈ ಸಂದರ್ಭದಲ್ಲಿ ಯುವಕ ಮಂಡಲದ ಗೌರವ ಸಲಹೆಗಾರರಾದ ನೋಟರಿ ವಕೀಲರಾದ ಶ್ರೀನಿವಾಸ್ ಗೌಡ ಗೌಡ ಶ್ರೀ ಸೌಧ ಬೆಳಾಲು, ಅಧ್ಯಪಕರಾದ ಭರತ್ ಬೆಳಾಲು, ಅನಿಲ್ ಡಿ ಸೋಜ, ಶ್ಯಾಮ್ ರಾಯ ಆಚಾರ್ಯ, ಡೀಕಯ್ಯ ಗೌಡ ಅರಣೆಮಾರು,ಕೇಶವ ಟೈಲರ್, ದಿನೇಶ್, ಹರೀಶ್ ದರ್ಖಾಸು ಬೆಳಾಲು,ಹಾಗೂ ಬೆಳಾಲು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ವಿದ್ಯಾ ಶ್ರೀನಿವಾಸ್ ಗೌಡ, ಹಾಗೂ ಪದಾಧಿಕಾರಿಗಳು, ಸದಸ್ಯರುಗಳು ಸಹಕರಿಸಿದರು.
ಶ್ರೀ ನಿತಿನ್ ಮೋನಿಸ್ ಸ್ವಾಗತಿಸಿ, ಶ್ರೀ ಶ್ರೀನಿವಾಸ ಗೌಡ ಶ್ರೀ ಸೌಧ ಬೆಳಾಲು ನಿರೂಪಣೆಗೈದು.
ಕಿರಣ್ ಸುವರ್ಣ ವಿಜೇತರ ವಿವರ ವಾಚಿಸಿದರು.

ರಮೀಝ್ ಭೀಮಂಡೆ, ಭವಿತ್ ಎಸ್ ವಿ, ಸಾತ್ವಿಕ್ ಸನ್ಮಾನ ಪತ್ರ ವಾಚಿಸಿದರು. ಹರ್ಷಿತ್ ಏರ್ದೊಟ್ಟು ಧನ್ಯವಾದವಿತ್ತರು.

ವಿಶೇಷ ಆಕರ್ಷಣೆಯ ಕೃಷ್ಣ ವೇಷ ಸ್ಪರ್ಧೆ, ಮೊಸರು ಕುಡಿಕೆ, ವಿವಿಧ ಆಟೋಟ ಸ್ಪರ್ಧೆಗಳು ನೆರವೇರಿತು.






