ಬೆಳ್ತಂಗಡಿ: ಕರಾವಳಿಯ ಪ್ರತಿಭೆಯೊಂದು ಮೈಸೂರಿನ ಉನ್ನತ ಶಿಕ್ಷಣ ಸಂಸ್ಥೆಯಲ್ಲಿ ಬಂಗಾರದ ಪದಕ ಗೆಲ್ಲುವ ಮೂಲಕ ತನ್ನ ಊರು ಹಾಗೂ ಪೋಷಕರು ಹೆಮ್ಮೆಪಡುವಂತೆ ಮಾಡಿದೆ.

ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಸುರ್ಯ ನಿವಾಸಿಗಳಾದ ಮೋವಿನ್ ರಸ್ಕಿನ್ಹಾ ಹಾಗೂ ಜೆಸಿಂತಾ ರಸ್ಕಿನ್ಹಾ ದಂಪತಿಯ ಪುತ್ರಿ ಮೋನಿಷಾ ರಸ್ಕಿನ್ಹಾ ಅವರು ಈ ಅದ್ಭುತ ಸಾಧನೆಗೆ ಭಾಜನರಾದವರು.


ಮೈಸೂರಿನ ಪ್ರತಿಷ್ಠಿತ ‘ಅಮೃತ ವಿಶ್ವ ವಿದ್ಯಾಪೀಠಂ’ ಸಂಸ್ಥೆಯಲ್ಲಿ ವಿಶುವಲ್ ಕಮ್ಯುನಿಕೇಷನ್ (ದೃಶ್ಯ ಸಂವಹನ) ವಿಭಾಗದಲ್ಲಿ, ಡಿಜಿಟಲ್ ಫಿಲ್ಮ್ ಮೇಕಿಂಗ್ ವಿಶೇಷತೆಯೊಂದಿಗೆ ಎಂ.ಎಸ್ಸಿ ಪದವಿ ವ್ಯಾಸಂಗ ಮಾಡುತ್ತಿದ್ದ ಮೋನಿಷಾ, ತಮ್ಮ 5 ವರ್ಷಗಳ ಸುದೀರ್ಘ ಅಧ್ಯಯನದ ಅವಧಿಯಲ್ಲಿ ನಿರಂತರವಾಗಿ ಪ್ರಥಮ ಸ್ಥಾನವನ್ನು ಕಾಯ್ದುಕೊಂಡು ಬಂದಿದ್ದಾರೆ. ತಮ್ಮ ಶೈಕ್ಷಣಿಕ ಶ್ರೇಷ್ಠತೆಗೆ ಪ್ರತಿಯಾಗಿ ಅವರು ಸಮಗ್ರ ಎಂ.ಎಸ್ಸಿ ಪದವಿಯ ಚಿನ್ನದ ಪದಕವನ್ನು ಪಡೆದುಕೊಂಡಿದ್ದಾರೆ.







