ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ನಾವೂರಿನಲ್ಲಿ ತಡರಾತ್ರಿ ದ್ರೋಹದ ಕೃತ್ಯವೊಂದು ನಡೆದಿದೆ.

ಸ್ಥಳೀಯ ಆರೋಗ್ಯ ಕ್ಲಿನಿಕ್ ಒಂದಕ್ಕೆ ದುಷ್ಕರ್ಮಿಗಳು ಡೀಸೆಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ.

ಆರೋಗ್ಯ ಕ್ಲಿನಿಕ್ ಕಟ್ಟಡದ ಎಡಬದಿಯಲ್ಲಿರುವ ಕಿಟಕಿಯಿಂದ ಒಳಭಾಗಕ್ಕೆ ಡೀಸೆಲ್ ಸುರಿದಿರುವ ಬಗ್ಗೆ ಶಂಕೆಯಿದೆ.

ಈ ಕಟ್ಟಡವು ತನುಜಾ ಶೇಖರ್ ರವರಿಗೆ ಸೇರಿದ್ದಾಗಿದೆ. ಈ ಕೃತ್ಯ ಯಾರು ಮಾಡಿದ್ದಾರೆ ಎಂಬುವುದು ಪೊಲೀಸ್ ತನಿಖೆಯಿಂದ ತಿಳಿದುಬರಬೇಕಿದೆ. ಈಗಾಗಲೇ ಸ್ಥಳಕ್ಕೆ ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.





