ಕಾಶಿಪಟ್ಣ: ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿ, ಕಾಶಿಪಟ್ಣ ಇದರ ಆಶ್ರಯದಲ್ಲಿ 15ನೇ ವರ್ಷದ “ಕಾಶಿಪಟ್ಣ ಶಾರದೋತ್ಸವ” ಕಾರ್ಯಕ್ರಮವು ಮುಂಬರುವ ಅಕ್ಟೋಬರ್ 18, 2026ರ ಆದಿತ್ಯವಾರದಂದು ಅತ್ಯಂತ ವಿಜೃಂಭಣೆಯಿಂದ ಕಾಶಿಪಟ್ಣದ ಕೇಳ ಗರಡಿ ಮೈದಾನದಲ್ಲಿ ನಡೆಯಲಿದೆ.

ಲೋಕ ಕಲ್ಯಾಣಾರ್ಥವಾಗಿ ಚಂಡಿಕಾಯಾಗ:
ಸಮಾರಂಭದ ದಿನ ಬೆಳಗ್ಗೆ 9:00 ಗಂಟೆಯಿಂದ ಲೋಕ ಕಲ್ಯಾಣಾರ್ಥವಾಗಿ ಶ್ರೀ ಕೆ. ಅನಂತ ಅಸ್ರಣ್ಣರವರ ಪೌರೋಹಿತ್ಯದಲ್ಲಿ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಶ್ರೀ “ಚಂಡಿಕಾಯಾಗ” ನೆರವೇರಲಿದೆ.

ತುಳು ನಾಟಕ “ಕಾಡಗಗ್ಗರ”:
ಸಂಜೆ 5:30 ರಿಂದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶಿವಾನಂದ ಶೆಟ್ಟಿ ಮಂಗಲ್ಪಾಡಿ ಅವರ ಸಾರಥ್ಯದ ‘ವಜ್ರದಂತ ಕಲಾವಿದೆರ್ ಕುಡ್ಲ’ ಅಭಿನಯಿಸುವ, ವಿಭಿನ್ನ ವಿನ್ಯಾಸದ ಅದ್ಧೂರಿ ತುಳು ಜನಪದ ರಂಗಪ್ರಯೋಗ “ಕಾಡಗಗ್ಗರ” ನಾಟಕ ಪ್ರದರ್ಶನಗೊಳ್ಳಲಿದೆ.
ಸಂಧ್ಯಾ ಪೂಜೆ ಹಾಗೂ ವೈಭವದ ವಿಸರ್ಜನೆ:
ಸಾಯಂಕಾಲ 7:30ಕ್ಕೆ ಶಾರದಾ ದೇವಿಗೆ ಮಹಾಪೂಜೆ (ಸಂಧ್ಯಾ ಪೂಜೆ) ನೆರವೇರಿ, ಭಕ್ತಾದಿಗಳಿಗೆ ಪ್ರಸಾದ ವಿತರಣೆ ನಡೆಯಲಿದೆ. ತದನಂತರ ರಾತ್ರಿ 8:00 ಗಂಟೆಗೆ ಶಾರದಾ ಮಾತೆಯ ವೈಭವದ ವಿಗ್ರಹ ವಿಸರ್ಜನಾ ಶೋಭಾಯಾತ್ರೆಯು ವಿಜೃಂಭಣೆಯಿಂದ ಜರುಗಲಿದೆ.

ಈ ಎಲ್ಲಾ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಗ್ರಾಮಸ್ಥರು, ಊರ-ಪರವೂರ ಭಕ್ತಾದಿಗಳು ಹಾಗೂ ಶಾರದಾಂಬೆಯ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಕಾಶಿಪಟ್ಣ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿಯ ಅಧ್ಯಕ್ಷರು, ಸ್ಥಾಪಕಾಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಆದರದ ಆಹ್ವಾನ ನೀಡಿದ್ದಾರೆ.





