ಕರ್ನಾಟಕ ರಾಜ್ಯದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಮಟ್ಟದ ಮತದಾರರ ಪಟ್ಟಿ ದೋಷಮುಕ್ತಗೊಳಿಸುವ ಪ್ರಕ್ರಿಯೆಗೆ ಚಾಲನೆ ಸಿಕ್ಕಿದೆ.

ರಾಜ್ಯದಲ್ಲಿ ಮತದಾರರ ಪಟ್ಟಿಯನ್ನು ಸಂಪೂರ್ಣವಾಗಿ ನವೀಕರಿಸುವ ಮತ್ತು ಪ್ರತಿಯೊಬ್ಬ ಅರ್ಹ ನಾಗರಿಕನನ್ನೂ ಒಳಗೊಳ್ಳುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿರುವ ‘ವಿಶೇಷ ತೀವ್ರ ಪರಿಷ್ಕರಣೆ’ (Special Intensive Revision – SIR) ಅಭಿಯಾನದ ಪ್ರಮುಖ ಹಂತವು ಇಂದು (ಜೂನ್ 30, 2026) ರಿಂದ ಅಧಿಕೃತವಾಗಿ ಆರಂಭವಾಗಲಿದೆ.
ರಾಜ್ಯ ಮುಖ್ಯ ಚುನಾವಣಾ ಅಧಿಕಾರಿಗಳ (CEO) ಕಚೇರಿಯ ನೇತೃತ್ವದಲ್ಲಿ ಚುನಾವಣಾ ಸಿಬ್ಬಂದಿಗಳು ಹಾಗೂ ಬೂತ್ ಮಟ್ಟದ ಅಧಿಕಾರಿಗಳು (BLO) ಮಂಗಳವಾರದಿಂದಲೇ ಸಾರ್ವಜನಿಕರ ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಣೆ ಪ್ರಕ್ರಿಯೆಯನ್ನು ಆರಂಭಿಸಲಿದ್ದಾರೆ.
24 ವರ್ಷಗಳ ಸುದೀರ್ಘ ಅವಧಿಯ ಬಳಿಕ ಎಸ್ಐಆರ್ (SIR):
ಕರ್ನಾಟಕ ರಾಜ್ಯದಲ್ಲಿ ಇಂತಹ ವಿಶೇಷ ತೀವ್ರ ಪರಿಷ್ಕರಣೆ (SIR) ನಡೆಯುತ್ತಿರುವುದು ಇದು 9ನೇ ಬಾರಿಯಾಗಿದೆ. ಕೊನೆಯದಾಗಿ 2002 ರಲ್ಲಿ ಈ ರೀತಿಯ ಬೃಹತ್ ಪ್ರಕ್ರಿಯೆ ನಡೆದಿತ್ತು. ಅಂದರೆ ಬರೋಬ್ಬರಿ 24 ವರ್ಷಗಳ ಬಳಿಕ ಈ ಪ್ರಕ್ರಿಯೆ ಮರುಕಳಿಸಿದೆ. 2002ರಲ್ಲಿ ಈ ಪ್ರಕ್ರಿಯೆ ನಡೆದಾಗ ಕರ್ನಾಟಕದಲ್ಲಿ ಕೇವಲ 3 ಕೋಟಿ ಮತದಾರರಿದ್ದರು. ಆದರೆ ಪ್ರಸ್ತುತ 2002ರ ದತ್ತಾಂಶ ಹಾಗೂ 2023ರ ಮತದಾರರ ಪಟ್ಟಿಯ ದತ್ತಾಂಶಗಳನ್ನು ಒಟ್ಟುಗೂಡಿಸಿ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಈ ಬಾರಿಯ ಅಭಿಯಾನವನ್ನು ನಡೆಸಲಾಗುತ್ತಿದೆ.
ಮನೆ ಮನೆ ಸಮೀಕ್ಷೆ: ಪ್ರಕ್ರಿಯೆ ಹೇಗೆ ನಡೆಯುತ್ತದೆ?
ಕ್ಯುಆರ್ ಕೋಡ್ ಫಾರ್ಮ್ಗಳು: ಪ್ರತಿ ಮತದಾರನಿಗೂ ಅವರ ವಿವರಗಳನ್ನು ಒಳಗೊಂಡ, ಕ್ಯುಆರ್ಕೋಡ್ (QR Code) ಹೊಂದಿರುವ ಎರಡು ಸೆಟ್ ವಿಶೇಷ ಮುದ್ರಿತ ಫಾರ್ಮ್ನಗಳನ್ನು ಬಿಎಲ್ಗಳು ನೀಡಲಿದ್ದಾರೆ.
ಪರಿಶೀಲನೆ ಮತ್ತು ಸಹಿ: ಮತದಾರರು ತಮ್ಮ ವಿವರಗಳನ್ನು ಪರಿಶೀಲಿಸಿ, ಭರ್ತಿ ಮಾಡಿ ಸಹಿ ಮಾಡಬೇಕು.

ರಶೀದಿ ಸಲ್ಲಿಕೆ: ಇದರಲ್ಲಿ ಒಂದು ಪ್ರತಿಯನ್ನು ಅಧಿಕಾರಿಗಳು ಸಹಿ ಮಾಡಿ ಮತದಾರರಿಗೆ ರಶೀದಿಯಂತೆ ಮರಳಿ ನೀಡಲಿದ್ದಾರೆ ಮತ್ತು ಎರಡನೇ ಪ್ರತಿಯನ್ನು ಮುಂದಿನ ದಾಖಲಾತಿ ಪ್ರಕ್ರಿಯೆಗಾಗಿ ಅಧಿಕಾರಿಗಳು ಪಡೆದುಕೊಳ್ಳಲಿದ್ದಾರೆ.
ಅವಧಿ: ಜೂನ್ 30ರಿಂದ ಆರಂಭವಾಗುವ ಈ ಪ್ರಕ್ರಿಯೆಯಲ್ಲಿ ಸಾರ್ವಜನಿಕರಿಗೆ ಫಾರಂ ಭರ್ತಿ ಮಾಡಿ
ಸಲ್ಲಿಸಲು 30 ದಿನಗಳ ಕಾಲಾವಕಾಶ ಇರಲಿದೆ.

ಈ ಫಾರ್ಮ್ ಸಲ್ಲಿಸುವಾಗ ಕೇಂದ್ರ ಅಥವಾ ರಾಜ್ಯ ಸರಕಾರ ಅನುಮೋದಿಸಿದ 11 ಅಧಿಕೃತ ಗುರುತಿನ (Voter ID, Aadhaar Card, Driving License) ಒದಗಿಸಬೇಕಾಗುತ್ತದೆ. ಯಾವುದೇ ಗೊಂದಲವಿಲ್ಲದೆ ಯಶಸ್ವಿಯಾಗಿ ಮುಗಿಸಲು ಜಿಲ್ಲಾಧಿಕಾರಿಗಳು ಹಾಗೂ ಪಂಚಾಯತ್ ಮುಖ್ಯಸ್ಥರಿಗೆ ಜವಾಬ್ದಾರಿ ವಹಿಸಲಾಗಿದೆ.





